ಕುಂದಗೋಳ : ಅಲ್ಲೇಲ್ಲಾ ದಾಸ ಶರಣರ ಕಿರ್ತನೆಗಳ ನಡುವೆ ಪಲ್ಲಕ್ಕಿ ಉತ್ಸವ, ಇಳಿ ವಯುಸ್ಸುಗಳ ತುಂಟಾಟದ ಕಲರವ, ಮುಗ್ದ ಮನಸ್ಸುಗಳು ಜೊತೆಯಾಟದ ವಿಠ್ಠಲ ರುಕ್ಮಿಣಿ ದೇವರ ಉತ್ಸವ.ಈ ಎಲ್ಲ ಸನ್ನಿವೇಶಗಳು ಕಂಡು ಬಂದಿದ್ದು ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ಜ್ಞಾನಶ್ವೇರ ಮಹಾರಾಜರ ಪೋತಿ ಮತ್ತು ವಿಠ್ಠಲ ರುಕ್ಮಿಣಿ ದೇವರ ದಿಂಡಿ ಉತ್ಸವದ ಉದ್ಧೂರಿ ಮೆರವಣಿಗೆ ಹಳ್ಳಿ ಗಾಡಿನಲ್ಲೋಂದು ಮಾಯಾ ಲೋಕವನ್ನೇ ಸೃಷ್ಟಿಸಿತ್ತು.
ದಿಂಡಿ ಉತ್ಸವ ಅಂಗವಾಗಿ ಚಾಕಲಬ್ಬಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾಧ್ಯ ಮೇಳಗಳ ಜೊತೆ ವಿಠ್ಠಲ ರುಕ್ಮಿಣಿ ದೇವಿಯ ಪಲ್ಲಕ್ಕಿ ಮೆರವಣಿಗೆ ದೀಪೋತ್ಸವ ಕಾರ್ಯಕ್ರಮ ಸಂಚರಿಸಿ ಗ್ರಾಮದ ಜನರ ಭಕ್ತಿ ಪರಾಕಾಷ್ಠೆಗೆ ಸಾಕ್ಷಿಯಾಯಿತು.
ವಯಸ್ಸಿನ ಮಿತಿಯನ್ನೆ ಮರೆತು ಆಟೋಟ ಆಡಿ ಆನಂದಿಸಿ, ಹಾಸ್ಯದ ಮಜಲನ್ನು ನೀಡಿದ ದೋತಿಯುಟ್ಟ ಹಿರಿಯರು ಕೀರ್ತನೆಕಾರರು ಜನರ ಗಮನ ಸೆಳೆದರೆ ಚಿಕ್ಕ ಮಕ್ಕಳು ಅವರಿಗೆ ಸಾಥ್ ನೀಡಿದರು.
ಗ್ರಾಮದ ಮಹಿಳೆಯರು ಆರತಿ ಹಿಡಿದು ಜ್ಞಾನಶ್ವೇರ ಪೋತಿ ವಿಠ್ಠಲ ರುಕ್ಮಿಣಿಯರ ದರ್ಶನ ಪಡೆದು ಪ್ರಸಾದ ಸೇವಿಸಿ ಜಾತ್ರೆ ಸವಿ ಸವಿದರು. ಈ ಸಂದರ್ಭದಲ್ಲಿ ಕುಂದಗೋಳ ತಾಲೂಕಿನ ವಿವಿಧ ಹಳ್ಳಿಗಳ ಜನರು ಆಗಮಿಸಿ ಪುನೀತರಾದರು.
Kshetra Samachara
08/02/2021 06:10 pm