ಹುಬ್ಬಳ್ಳಿ: ಮೂರುಸಾವಿರ ಮಠಕ್ಕೆ ಉನ್ನತ ಮಟ್ಟದ ಸಮಿತಿಗೆ ದೊಡ್ಡ ದೊಡ್ಡ ವ್ಯಕ್ತಿಗಳು ಬಂದಿದ್ದಾರೆ. ಮಠ ದೊಡ್ಡ ಪ್ರಮಾಣಲ್ಲಿ ಬೆಳೆಯುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವು. ಆದರೆ ಉದ್ದಾರ ಮಾಡದೇ ಮಠದ ಆಸ್ತಿಯನ್ನು ತಮ್ಮಗೆ ಬೇಕಾದವರಿಗೆ ಮಾರಾಟ ಮಾಡಿಸುತ್ತಿದ್ದಾರೆ ಎಂದು ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಮಠದ ಉನ್ನತಮಟ್ಟದ ಸಮಿತಿ ಸದಸ್ಯರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ನಗರದ ಭೈರಿದೇವರಕೊಪ್ಪದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಠ ಉದ್ದಾರ ಮಾಡಲು ಮಠದ ಉನ್ನತ ಮಟ್ಟದ ಸಮಿತಿಯಲ್ಲಿ ಬಸವರಾಜ್ ಹೊರಟ್ಟಿ, ಜಗದೀಶ್ ಶೆಟ್ಟರ್, ವೀರಣ್ಣ ಮತ್ತಿಕಟ್ಟಿ, ಬಸವರಾಜ್ ಬೊಮ್ಮಾಯಿ, ವಿಜಯಸಂಕೇಶ್ವರ, ಮೋಹನ ಲಿಂಬಿಕಾಯಿ, ಶಂಕರಣ್ಣ ಮುನ್ನವಳ್ಳಿಯಂತ ದೊಡ್ಡದೊಡ್ಡವರು ಬಂದಿದ್ದಾರೆ. ಇವರೆಲ್ಲ ಸೇರಿ ಮಠ ಉದ್ದಾರ ಮಾಡುತ್ತಾರೆ ಅಂತ ಮಾಡಿದ್ದೆ. ಆದರೆ ಇವರು ಮಠ ಆಸ್ತಿ ಮಾರಾಟ ಮಾಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಠದ ಬೆಳವಣಿಗೆಯಿಂದ ಬೇಸತ್ತು ವಿಜಯ ಸಂಕೇಶ್ವರ ಅವರು ಮಠದ ಉನ್ನತ ಮಟ್ಟದ ಸಮಿತಿಗೆ ರಾಜೀನಾಮೆ ನೀಡಿದ್ದರು. ಉನ್ನತ ಮಟ್ಟದ ಸಮಿತಿಯವರು ಮಠ ಉದ್ದಾರ ಮಾಡುವುದನ್ನು ಬಿಟ್ಟು ಮಠದ ಆಸ್ತಿ ತಮ್ಮಗೆ ಬೇಕಾದವರಿಗೆ ಕೊಡಿಸುವ ಕೆಲಸ ಮಾಡಿದ್ದಾರೆ.ಇದಕ್ಕೆ ಪ್ರತ್ಯಕ್ಷ ಉದಾಹರಣೆ ಕೇಶ್ವಾಪುರದ ಎರಡು ಎಕರೆ ಜಮೀನು ಕೇವಲ 10 ಲಕ್ಷಕ್ಕೆ ಮಜ್ಜಗಿ ಎನ್ನುವರಿಗೆ ಮಾರಿಸಿದ್ದಾರೆ ಎಂದು ಆರೋಪಿಸಿದರು.
Kshetra Samachara
08/02/2021 11:03 am