ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ದೇಶಸೇವೆ ಗೈದು ಮರಳಿದ ಯೋಧನಿಗೆ ಅದ್ಧೂರಿ ವೆಲ್‌ಕಮ್

ಕುಂದಗೋಳ : ಭಾರತೀಯ ಭೂ ಸೇನೆಯಲ್ಲಿ ಕಳೆದ ಇಪ್ಪತ್ತೋಂದು ವರ್ಷಗಳ ಕಾಲ ಸೇವೆ ಸಲ್ಲಿಸಿ ವೃತ್ತಿಯಿಂದ ನಿವೃತ್ತಿ ಪಡೆದು ಸ್ವಗ್ರಾಮಕ್ಕೆ ಆಗಮಿಸಿದ ವೀರಯೋಧನಿಗೆ ಅದ್ಧೂರಿ ಸ್ವಾಗತ ಏರ್ಪಟ್ಟಿತು.

ಹೌದು.. ಕುಂದಗೋಳ ತಾಲೂಕಿನ ದೇವನೂರು ಗ್ರಾಮದ ಸುರೇಶ್ ಬಸಪ್ಪ ನೇಗಿನಾಳ, 21 ವರ್ಷಗಳ ಕಾಲ ಬಿ.ಎಸ್.ಎಫ್ ಯೋಧರಾಗಿ ಪಶ್ಚಿಮಬಂಗಾಳ, ಪಂಜಾಬ್, ಜಮ್ಮು ಕಾಶ್ಮೀರ ಸೇರಿದಂತೆ ವಿವಿಧೆಡೆ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಯೋಧನನ್ನು ತೆರೆದ ವಾಹನದಲ್ಲಿ ದೇವನೂರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಬಳಿಕ ದೇವನೂರು ಆಂಜನೇಯನ ದರ್ಶನ ಪಡೆದ ವೀರಯೋಧ ಸುರೇಶ್ ಬಸಪ್ಪ ನೇಗಿನಾಳ ವೇದಿಕೆ ಕಾರ್ಯಕ್ರಮದಲ್ಲಿ ಅಭಿನವ ಕಲ್ಯಾಣಪುರ ಬಸವಣ್ಣನವರು ಯೋಧನ ಸಾಧನೆ ಹೊಗಳಿ ದೇಶ ಸೇವೆ ಮಾಡುವುದೇ ಮಹಾನ್ ಪುಣ್ಯ ಎಂದರು.

ವೀರಯೋಧ ಸುರೇಶ್ ಬಸಪ್ಪ ನೇಗಿನಾಳ ತಮ್ಮ ಸೇನಾ ದಿನಗಳ ನೆನಪು ಹಾಗೂ ಸೇನೆ ಕಾರ್ಯವೈಖರಿ ಕುರಿತು ಗ್ರಾಮದ ಜನರಿಗೆ ಅರಿವು ಹೇಳಿದರು.

Edited By :
Kshetra Samachara

Kshetra Samachara

06/08/2022 12:49 pm

Cinque Terre

31.8 K

Cinque Terre

6

ಸಂಬಂಧಿತ ಸುದ್ದಿ