ಕಲಘಟಗಿ:ತಾಲೂಕಿನ ದಾಸ್ತಿಕೊಪ್ಪ ಹನ್ನೆರಡು ಮಠದ ಲಿಂ.ಶ್ರೀ ಷ ಬ್ರ ಮಡಿವಾಳ ಶಿವಾಚಾರ್ಯ ಸ್ವಾಮಿಗಳ ಲಿಂಗಾಂಗಸಾಮರಸ್ಯದ ೩೦ನೇ ವರ್ಷದ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಶ್ರೀ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಬೆಳಿಗ್ಗೆ ಲಿಂ.ಶ್ರೀ ಷ ಬ್ರ ಮಡಿವಾಳ ಶಿವಾಚಾರ್ಯ ಗದ್ದುಗೆಗೆ ಅಭಿಷೇಕ,ವಿಶೇಷ ಪೂಜೆಯನ್ನು ಹಾಗೂ ವೇದ ಘೋಷ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ನಂತರ ಶ್ರೀ ವೀರಭದ್ರೇಶ್ವರನ ಗುಗ್ಗಳ ನೆರವೇರಿಸಲಾಯಿತು.ಸುತ್ತಲಿನ ಗ್ರಾಮಗಳ ಭಕ್ತರು ಲಿಂ.ಶ್ರೀ ಷ ಬ್ರ ಮಡಿವಾಳ ಶಿವಾಚಾರ್ಯ ಗದ್ದುಗೆಗೆ ಪೂಜೆಯನ್ನು ಸಲ್ಲಿಸಿ ಕೃತಾರ್ಥರಾದರು.
Kshetra Samachara
12/12/2020 01:52 pm