ಧಾರವಾಡ ಜಿಲ್ಲೆಯಾದ್ಯಂತ ನಿನ್ನೆ ಸುರಿದ ಮಳೆಗೆ ರೈತರು ರಾಶಿ ಮಾಡಿಟ್ಟಿದ್ದ ಸೋಯಾಬಿನ್ ಬೆಳೆ ಸಂಪೂರ್ಣ ನಾಶವಾಗಿದ್ದು, ಅನ್ನದಾತ ಕಣ್ಣೀರಿಡುತ್ತಿದ್ದಾನೆ.
ಧಾರವಾಡ ತಾಲೂಕಿನ ಮಾರಡಗಿ ಗ್ರಾಮದ ಮಕ್ತುಂಸಾಬ್ ದರ್ಗಾದ್ ಹಾಗೂ ಗುರುನಾಥ ಬಳ್ಳಾರಿ ಎಂಬ ರೈತರಿಗೆ ಸೇರಿದ ಸೋಯಾಬಿನ್ ಮಳೆಗೆ ಸಂಪೂರ್ಣ ನಾಶವಾಗಿದೆ. ಒಟ್ಟು 12 ಎಕರೆ ಪ್ರದೇಶದಲ್ಲಿ ಸೋಯಾಬಿನ್ ಬೆಳೆಯಾಗಿತ್ತು. ಅದನ್ನು ಕಟಾವು ಮಾಡಿ ರಾಶಿ ಕೂಡ ಮಾಡಲಾಗಿತ್ತು. ರಾಶಿ ಮಾಡಿದ ಸೋಯಾಬಿನ್‌ನ್ನು ಇನ್ನೇನು ಮನೆಗೆ ತರಬೇಕು ಎನ್ನುವಷ್ಟರಲ್ಲಿ ವರುಣ ಅಬ್ಬರಿಸಿದ್ದರಿಂದ ಹೊಲದಲ್ಲಿದ್ದ ಸೋಯಾಬಿನ್ ಧಾನ್ಯಗಳು ಸಂಪೂರ್ಣ ನೀರು ಪಾಲಾಗಿವೆ.
ಅಂದಾಜು 10 ಲಕ್ಷ ಬೆಲೆಬಾಳುವ 200 ಕ್ವಿಂಟಾಲ್ ಸೋಯಾಬಿನ್ ಧಾನ್ಯಗಳು ಮಳೆಗೆ ಆಹುತಿಯಾಗಿದ್ದು, ಇದನ್ನು ಕಂಡ ರೈತರು ಕಣ್ಣೀರಿಡುತ್ತಿದ್ದಾರೆ. ನೀರಿನಲ್ಲಿ ನೆನೆದ ಕಾಳುಗಳನ್ನು ರೈತರು ಕಣ್ಣೀರು ಹಾಕುತ್ತಲೇ ಬೇರ್ಪಡಿಸುತ್ತಿದ್ದ ದೃಶ್ಯ ಕಂಡು ಬಂತು. ಅಲ್ಲದೇ ನಮಗೆ ಪರಿಹಾರ ಕೊಡಿಸಿ ಎಂದು ರೈತರು ಅಂಗಲಾಚುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/10/2022 06:08 pm