ನಿನ್ನೆ (ಸೋಮವಾರ) ಸುರಿದ ಧಾರಾಕಾರ ಮಳೆಯಿಂದಾಗಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಾಕಷ್ಟು ಪ್ರದೇಶಗಳು ಜಲಾವೃತಗೊಂಡಿವೆ.
ಅದೇ ರೀತಿ ವಾರ್ಡ್ ನಂಬರ್ 77 ರಲ್ಲಿ ಬರುವ ಗೌಸಿಯಾ ನಗರದಲ್ಲಿನ ನಿವಾಸಿಗಳ ಗೋಳು ಹೇಳತೀರದಾಗಿದೆ. ರಾಜ ಕಾಲುವೆ ನದಿಯಂತೆ ಉಕ್ಕಿ ಹರಿಯುತ್ತಿವೆ. ಹಾವು, ಚೇಳುಗಳು ಮನೆ ಒಳಗೆ ನುಗ್ಗುತ್ತಿವೆ. ಮಳೆ ನೀರು ಮನೆಗೆ ನುಗ್ಗಿ ಮನೆ ವಸ್ತುಗಳು ಹಾಳಾಗಿವೆ.
ಇಲ್ಲಿನ ಜನ ಸುಮಾರು ವರ್ಷಗಳಿಂದ ಇಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ರೂ ಯಾವ ಜನಪ್ರತಿನಿಧಿಗಳೂ ಇತ್ತ ಬಂದಿಲ್ವಂತೆ. ಈ ಕುರಿತು ನಮ್ಮ ಪ್ರತಿನಿಧಿ ಈರಣ್ಣ ವಾಲಿಕಾರ ನೀಡಿರುವ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/10/2022 04:59 pm