ಹೌದು..ವಾರ್ಡ್ 64ರಲ್ಲಿ ಬರುವ ಗಣೇಸ್‌ಪೇಟೆ ವಡ್ಡರ ಓಣಿಯಲ್ಲಿ ಸುಮಾರು ವರ್ಷಗಳಿಂದ ನೀರಿಗಾಗಿ ಪರದಾಡುತ್ತಿದ್ದರು. ಈ ಬಗ್ಗೆ ಈ ಭಾಗದ ಶಾಸಕ ಪ್ರಸಾದ ಅಬ್ಬಯ್ಯ ಜನರಿಗೆ ಅನುಕೂಲವಾಗಲೆಂದು ನೀರಿನ ಬೋರ್‌ವೆಲ್ ಪೈಪ್ ಅಳವಡಿಸಲು ಎಲ್ ಆ್ಯಂಡ್ ಟಿ ಅವರಿಗೆ ಹೇಳಿದ್ದರು. ಆದ್ರೆ ಇಲ್ಲಿನ ಬಿಜೆಪಿ ಕಾರ್ಪೊರೇಟರ್ ಪೂಜಾ ಶೇಜವಾಡಕರ್ ಪತಿ ಸತೀಶ್ ಶೇಜವಾಡಕರ್ ಎಲ್ ಆ್ಯಂಡ್ ಟಿ ಕಂಪನಿಯವರಿಗೆ ಕರೆ ವಡ್ಡರ ಓಣಿಯಲ್ಲಿ ನೀರಿನ ಪೈಪ್ ಅಳವಡಿಸಬೇಡಿ ಎಂದು ಹೇಳಿದ್ದಾರೆಂದು ಕಾಮಗಾರಿಯನ್ನು ಸ್ಟಾಪ್ ಮಾಡಿಸಿದ್ದನ್ನು ಇಲ್ಲಿನ ಜನರ ಆರೋಪ ಮಾಡಿದ್ದರು.
ಈ ಕುರಿತು ಜನಪ್ರಿಯ ಪಬ್ಲಿಕ್ ನೆಕ್ಸ್ಟ್ ಮೂರು ದಿನಗಳ ಹಿಂದೆ "ಶಾಸಕರ ಅನುಮತಿಗೆ ಬ್ರೇಕ್ ಹಾಕಿದ ಪಾಲಿಕೆ ಸದಸ್ಯೆ; ವಾರ್ಡ್ ನಂ. 64 ರ ವಡ್ಡರ ಓಣಿ ಜನರು ನೀರಿಗಾಗಿ ಪರದಾಟ" ಎಂಬ ಶೀರ್ಷಿಕೆಯಲ್ಲಿ ಸುದ್ದಿಯನ್ನು ಬಿತ್ತರಿಸಿತ್ತು. ಸುದ್ದಿಯನ್ನು ನೋಡಿದ ಶಾಸಕ ಪ್ರಸಾದ ಅಬ್ಬಯ್ಯ ಕೂಡಲೇ ಎಲ್ ಆ್ಯಂಡ್ ಟಿ ಕಂಪನಿಯವರಿಗೆ ತರಾಟೆಗೆ ತೆಗೆದುಕೊಂಡು ಸದ್ಯ ಕಾಮಗಾರಿಯನ್ನು ಆರಂಭಿಸಿದ್ದಾರೆ. ಇದರಿಂದಾಗಿ ಇಲ್ಲಿನ ನಿವಾಸಿಗಳು ಪಬ್ಲಿಕ್ ನೆಕ್ಸ್ಟ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/09/2022 06:51 pm