ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾರ್ಡ್ ನಂ.39ರ ಜನರ ಸಮಸ್ಯೆ; ಸ್ಪಂದಿಸುತ್ತಿಲ್ಲವಂತೆ ಇಲ್ಲಿನ ಕಾರ್ಪೊರೇಟರ್ ಮೊಗಲಿಶೆಟ್ಟರ್

ಇದು ವಾರ್ಡ್ ನಂಬರ 39ರ ಸಮಸ್ಯೆಗಳ ಆಗರ, ಸೂಕ್ತವಾದ ರಸ್ತೆ ಇಲ್ಲದೇ, ಒಳ ಚರಂಡಿ ವ್ಯವಸ್ಥೆ ಇಲ್ಲದೆ ಇಲ್ಲಿನ ಜನ ದಿನನಿತ್ಯ ಪರದಾಡುತ್ತಿದ್ದಾರೆ..

ಒಂದು ಕಡೆ ನೋಡಿದ್ರೆ ಸರಿಯಾದ ರಸ್ತೆ ಇಲ್ಲ. ಇನ್ನೊಂದಡೆ ಒಳಚರಂಡಿ ವ್ಯವಸ್ಥೆ ಇಲ್ಲದೆ, ಚರಂಡಿ ನಿರೆಲ್ಲ ರಸ್ತೆ ಮೇಲೆ, ಮನೆ ಒಳಗೆ ನುಗ್ಗುತ್ತಿದೆ. ಇಷ್ಟೆಲ್ಲಾ ಸಮಸ್ಯೆಗಳಿಗೆ ಸಾಕ್ಷಿಯಾಗಿದ್ದು ವಾರ್ಡ್ 39ರಲ್ಲಿ ಶಿರಡಿನಗರದ ಗಿರಿರಾಜನಗರದಲ್ಲಿ. ಒಂದು ಚಿಕ್ಕ ಮಳೆ ಬಂದ್ರೆ ಸಾಕು ಚರಂಡಿ ಎಲ್ಲ ಬ್ಲಾಕ್ ಆಗಿ ಮನೆ ಒಳಗೆ ನುಗ್ಗುತ್ತದೆ. ಇಷ್ಟೆಲ್ಲ ಸಮಸ್ಯೆಗಳ ಬಗ್ಗೆ ಇಲ್ಲಿನ ಕಾರ್ಪೊರೇಟರ್ ಸೀಮಾ ಸಿದ್ದು ಮೊಗಲಿಶೆಟ್ಟರ್ ಅವರನ್ನ ಕೇಳಲು ಹೋದ್ರೆ ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ಇಲ್ಲಿನ ನಿವಾಸಿಗಳು ನೇರವಾಗಿ ಆರೋಪ ಮಾಡುತ್ತಿದ್ದಾರೆ.

ಇನ್ನು ಇದೆ ವಾರ್ಡ್ ಕಾರ್ಪೊರೇಟರ್ ಸೀಮಾ ಮೊಗಲಿಶೆಟ್ಟರ್ ಕೇಳಿದ್ರೆ, ನಾನು ನಮ್ಮ ವಾರ್ಡ್‌ದಲ್ಲಿ ದಿನಂಪ್ರತಿ ಓಡಾಡುತ್ತೇನೆ. ಎಲ್ಲರಿಗೂ ಸ್ಪಂದಿಸುತ್ತೇನೆ ಇಲ್ಲಿನ ಸಮಸ್ಯೆ ನಮ್ಮ ಗಮನಕ್ಕೆ ಬಂದಿರಲಿಲ್ಲಾ. ಆದಷ್ಟು ಬೇಗ ಈ ನಗರದ ಸಮಸ್ಯೆಗಳನ್ನು ಬಗೆ ಹರಿಸುತ್ತೆವೆ ಎಂದು ಪಬ್ಲಿಕ್ ನೆಕ್ಸ್ಟ್ ಮೂಲಕ ತಿಳಿಸಿದ್ದಾರೆ.

ಇನ್ನು ಈ ವಾರ್ಡ್ ದೊಡ್ಡ ಆರೋಪ ಎಂದರೆ, ತನ್ನ ಪತ್ನಿಯ ಆಡಳಿತವನ್ನು ಪತಿ ಸಿದ್ದು ಮೊಗಲಿಶೆಟ್ಟರ್ ಆಳ್ವಿಕೆ ಮಾಡುತ್ತಿದ್ದಾರೆ. ಹೆಸರಿಗೆ ಮಾತ್ರ ಸೀಮಾ ಮೊಗಲಿಶೆಟ್ಟರ್ ಪಾಲಿಕೆ ಸದಸ್ಯೆ. ಎಲ್ಲ ಆಡಳಿತವನ್ನು ಪತಿ ಸಿದ್ದು ಮೊಗಲಿಶೆಟ್ಟರ್ ಆಳ್ವಿಕೆ ಮಾಡುತ್ತಾರೆಂದು ಇಲ್ಲಿನ ನಿವಾಸಿಗಳು ಆರೋಪ ಮಾಡಿದ್ದರು. ಈ ಬಗ್ಗೆ ಸ್ವತಃ ಬಿಜೆಪಿ ಮುಖಂಡ ಸಿದ್ದು ಮೊಗಲಿಶೆಟ್ಟರ್ ಪಬ್ಲಿಕ್ ನೆಕ್ಸ್ಟ್ ಏನು ಹೇಳಿದ್ದಾರೆ ಕೇಳಿ.

ಏನೆ ಆಗಲಿ ಆದಷ್ಟು ಬೇಗ ಇಲ್ಲಿನ ಸಮಸ್ಯೆಗಳನ್ನು ಬಗೆ ಹರಿಸಿ ಈ ಬಡ ಜನರು ನೆಮ್ಮದಿಯಾಗಿ ಜೀವನ ನಡೆಸಲು ಅನುಕೂಲ ಮಾಡಿಬೇಕಾಗಿದೆ. ಮಹಾನಗರವೋ ಮಹಾನರಕವೋ ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಆರಂಭಿಸಿರುವ ಜನರ ಸಮಸ್ಯೆಗೆ ಉತ್ತಮ ಸ್ಪಂದನೆ ಸಿಗುತ್ತಿದೆ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/09/2022 02:42 pm

Cinque Terre

55.34 K

Cinque Terre

3

ಸಂಬಂಧಿತ ಸುದ್ದಿ