ಹುಬ್ಬಳ್ಳಿ: ಹುಬ್ಬಳ್ಳಿ ಆಕಾಶಬುಟ್ಟಿ ಹಬ್ಬ-2021 ನ್ನು ನ.13 ರಂದು ಸಂಜೆ 6 ಗಂಟೆಗೆ ಇಲ್ಲಿನ ಮೂರುಸಾವಿರಮಠದ ಗಂಗಾಧರ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹುಬ್ಬಳ್ಳಿ ಆಕಾಶಬುಟ್ಟಿ ಹಬ್ಬದ ಅಧ್ಯಕ್ಷ ರಾಜು ಜರತಾರಘರ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಕತ್ತಲನ್ನು ಹೊಗಲಾಡಿಸಿ ಬೆಳಕನ್ನು ಚಿಮ್ಮುವ, ಬೆಳಕಿನ ಹಬ್ಬ ಹುಬ್ಬಳ್ಳಿ ಆಕಾಶ ಬುಟ್ಟಿ ಹಬ್ಬವನ್ನು ಕಳೆದ ವರ್ಷದಿಂದ ಆಚರಣೆ ಮಾಡುತ್ತಾ ಬರಲಾಗಿದೆ. ಅದರಂತೆ ಈ ವರ್ಷವು ಆಕಾಶ ಬುಟ್ಟಿ ಹಬ್ಬ ಆಚರಿಸಲಾಗುತ್ತಿದೆ. ಈ ವರ್ಷವು ವಿವಿಧ ಪ್ರದೇಶಗಳಿಂದ ಜನರು ತಾವೇ ಸ್ವತಃ ಆಕಾಶಬುಟ್ಟಿ ತಯಾರಿಸಿ ಹಾರಿಸಲಿದ್ದಾರೆ. ಉತ್ತಮ ಆಕಾಶಬುಟ್ಟಿಗಳಿಗೆ ನಗದು ಬಹುಮಾನ ಕೊಡಲಾಗುವುದು.
ಇನ್ನು ಆಕಾಶಬುಟ್ಟಿ ಹಬ್ಬದ ಪ್ರಯುಕ್ತವಾಗಿ ಮಹಿಳೆಯರಿಗೆ, ಮಕ್ಕಳಿಗಾಗಿ ಈಗಾಗಲೇ ನಗರದಲ್ಲಿ ರಂಗೋಲಿ, ಮೆಹಂದಿ, ವಡಪು ಹೇಳುವ ಸ್ಪರ್ಧೆ ನಡೆಸಲಾಗುತ್ತಿದೆ ಅವರಿಗೂ ಅಂದು ಬಹುಮಾನ ವಿತರಣೆ ಮಾಡಲಾಗುವುದು ಎಂದರು.
ಆಕಾಶಬುಟ್ಟಿ ಹಬ್ಬಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಚಾಲನೆ ನೀಡುವರು, ಮೂರುಸಾವಿರಮಠದ ಗುರುಸಿದ್ದರಾಜಯೋಗೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಲಿದ್ದಾರೆ. ಅತಿಥಿಗಳಾಗಿ ಮುಖ್ಯ ಅತಿಥಿಗಳಾಗಿ ವಿಪ ಸದಸ್ಯ ಪ್ರದೀಪ ಶೆಟ್ಟರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಹು-ಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಎಸ್.ಎಸ್.ಕರ ಸಮಾಜ ಹು-ಧಾ ಕೇಂದ್ರ ಪಂಚ ಸಮಿತಿಯ ಧರ್ಮದರ್ಶಿ ನೀಲಕಂಠಸಾ ಜಡಿ ಸೇರಿದಂತೆ ಮುಂತಾದವರು ಆಗಮಿಸಲಿದ್ದಾರೆ ಎಂದರು.
Kshetra Samachara
12/11/2021 01:14 pm