ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಹಸ್ರಾರ್ಜುನ ಜಯಂತಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಚಾಲನೆ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಭಾರತೀಯ ಜನತಾ ಪಕ್ಷದ ವತಿಯಿಂದ ದೇಶಪಾಂಡೆ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಸಹಸ್ರಾರ್ಜುನ ಜಯಂತಿಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಎಸ್.ಎಸ್.ಕೆ ಸಮಾಜದ ಮುಖಂಡರ ಹಾಗೂ ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲಿ ಸಹಸ್ರಾರ್ಜುನ ಮಹಾರಾಜದ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಇನ್ನೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳೆಯರು ಮಂಗಳಾರತಿ ಬೆಳಗಿ ಹಾಡಿನ ಮೂಲಕ ಸಹಸ್ರಾರ್ಜುನರನ್ನು ವರ್ಣಿಸಿರುವುದು ಕಾರ್ಯಕ್ರಮಕ್ಕೆ ಹೊಸ ಕಳೆಯನ್ನು ತುಂಬಿದೆ.

Edited By : PublicNext Desk
Kshetra Samachara

Kshetra Samachara

11/11/2021 12:20 pm

Cinque Terre

22.33 K

Cinque Terre

0

ಸಂಬಂಧಿತ ಸುದ್ದಿ