ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹಳ್ಳಿಗರು ಡಿಜಿಟಲ್ ಮಾಧ್ಯಮಕ್ಕೆ ಬರುವಂತೆ ಪ್ರೇರೇಪಿಸಿ: ಬ್ಯಾಂಕುಗಳಿಗೆ ಕರೆ

ಧಾರವಾಡ: ಆರ್ಥಿಕ ಸೇರ್ಪಡೆ, ಆರ್ಥಿಕ ಸಾಕ್ಷರತೆ, ಆದ್ಯತಾ ವಲಯದ ಸಾಲ ಮತ್ತು ಸಾಲದ ಸದ್ಭಳಕೆಯ ಮನೋಭಾವನೆಯನ್ನು ಬೆಳೆಸುವುದು ಹಾಗೆಯೇ ಹಳ್ಳಿಗರನ್ನು ಡಿಜಿಟಲ್ ಮಾಧ್ಯಮಕ್ಕೆ ಪ್ರೇರೇಪಿಸುವುದು ಪ್ರಾದೇಶಿಕ ಗ್ರಾಮೀಣ ಬ್ಯಾಂಕಿನ ಮುಖ್ಯ ಗುರಿಯಾಗಬೇಕು ಎಂದು ಕೆನರಾ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಬ್ರಿಜ್ ಮೋಹನ್ ಶರ್ಮಾ ಹೇಳಿದರು.

ಧಾರವಾಡ ನಗರದಲ್ಲಿ ಲ್ಯಾಂಡ್ ಮಾರ್ಕ್ ಕಟ್ಟಡವಾಗಿ ಮಾರ್ಪಟ್ಟಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಪ್ರಧಾನ ಕಚೇರಿ ಸಂಕೀರ್ಣವನ್ನು "ವಿಕಾಸ ಭವನ" ಎಂದು ಹೆಸರಿಸಿದ ನಂತರ ಅವರು ಬ್ಯಾಂಕ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಇಂದಿಗೂ ಶೇ.70 ಕ್ಕಿಂತ ಹೆಚ್ಚು ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದು ಮತ್ತು ಹೆಚ್ಚಿನವರ ಜೀವನ ಮಟ್ಟವು ನಿರೀಕ್ಷೆಯಂತೆ ಸುಧಾರಿಸಿಲ್ಲ ಎಂದು ಶರ್ಮಾ ಹೇಳಿದರು.

ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಆರ್ಥಿಕ ಪ್ರಗತಿಯತ್ತ ಸೆಳೆಯಲು ಯಾವುದೇ ತಡೆಯಿಲ್ಲದೇ ಸಾಲಗಳನ್ನು ಮಂಜೂರು ಮಾಡುವಂತೆ ಮತ್ತು ಒಂದಿಲ್ಲೊಂದು ಆರ್ಥಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಅವರು ಶಾಖೆಯ ವ್ಯವಸ್ಥಾಪಕರನ್ನು ಕೇಳಿಕೊಂಡರು.

ಗ್ರಾಮೀಣಾಭಿವೃದ್ಧಿಯಲ್ಲಿ ಗ್ರಾಮೀಣ ಬ್ಯಾಂಕುಗಳು ಮಹತ್ವದ ಪಾತ್ರ ವಹಿಸುತ್ತಿದ್ದರೂ ಸುಲಭ ಬ್ಯಾಂಕಿಂಗ್ ಸೇವೆಗಳನ್ನು ಪರಿಚಯಿಸುವಲ್ಲಿ ಮತ್ತು ಪ್ರಾದೇಶಿಕವಾಗಿ ಸಾಲದ ಹರಿವನ್ನು ಹೆಚ್ಚಿಸುವಲ್ಲಿ ಇನ್ನೂ ಹೆಚ್ಚಿನ ಯತ್ನ ಮಾಡಬೇಕಿದೆ ಎಂದರು.

ಕಳೆದ ನಾಲ್ಕು ದಶಕಗಳಲ್ಲಿ ಕೆನರಾ ಬ್ಯಾಂಕ್ ಪ್ರಾಯೋಜಿತ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ಅದರಲ್ಲೂ ವಿಶೇಷವಾಗಿ ಕೃಷಿ ಸಮುದಾಯದ ಜೀವನ ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಶರ್ಮಾ ಹೇಳಿದರು.

ಗ್ರಾಮೀಣ ಭಾಗದ ಅಭಿವೃದ್ಧಿಗೆ ಸಾಮೂಹಿಕ ಜವಾಬ್ದಾರಿ ಅವಶ್ಯಕವೆಂದ ಅವರು, ಡಿಜಟಲೀಕರಣದ ಈ ಕಾಲದಲ್ಲಿ ವೈಯಕ್ತಿಕ ಗ್ರಾಹಕ ಸೇವೆಯನ್ನು ಮರೆಯದಿರಲು ಕರೆ ನೀಡಿದರು.

ಬ್ಯಾಂಕಿನ ಅಧ್ಯಕ್ಷ ಪಿ.ಗೋಪಿಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಬ್ಯಾಂಕು ಪ್ರತಿ ವರ್ಷ ಉತ್ತಮ ಬೆಳವಣಿಗೆಯನ್ನು ದಾಖಲಿಸುತ್ತಿದೆ ಹಾಗೆಯೇ ಅದರ ವ್ಯವಹಾರವು 27800 ಕೋಟಿ ದಾಟಿದೆ ಎಂದೂ ಹೇಳಿದರು.

ಗ್ರಾಮಿಣ ಪರಿಸರವನ್ನು ಅರಿತುಕೊಂಡು ಸಮಾಜಕ್ಕೆ ಬೇಕಾದ ಕೈಗೆಟಕುವ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಬ್ಯಾಂಕ್ ಬದ್ಧವಾಗಿದೆ ಎಂದು ಅವರು ಹೇಳಿದರು.

ಪ್ರಸ್ತುತ ಬ್ಯಾಂಕು 629 ಶಾಖೆಗಳೊಂದಿಗೆ 2045 ಗ್ರಾಮಗಳಿಗೆ ಸೇವೆ ನೀಡುತ್ತಲಿದ್ದು ಕಿರು ಸಾಲ ನೀಡಿಕೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ ಎಂದರು.

Edited By : PublicNext Desk
Kshetra Samachara

Kshetra Samachara

13/08/2021 10:19 pm

Cinque Terre

42.24 K

Cinque Terre

1

ಸಂಬಂಧಿತ ಸುದ್ದಿ