ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಹಳೆಯ ವಿದ್ಯಾರ್ಥಿಗಳಿಂದ ಸಭೆ

ನವಲಗುಂದ : 2019ರಿಂದ 2023ರ ಅವಧಿಯಲ್ಲಿ ಪದವಿ ತೇರ್ಗಡೆಯಾಗಿ ಉನ್ನತ ಶಿಕ್ಷಣ ಪಡೆಯುತ್ತಿರುವ, ಸರಕಾರಿ ಹಾಗೂ ಅರೆ ಸರಕಾರಿ ಸೇವೆಯಲ್ಲಿರುವ, ಇತರೆ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳು ಭಾಗವಹಿಸಿ, ಹಳೆಯ ವಿದ್ಯಾರ್ಥಿಗಳ ಸಂಘಕ್ಕೆ ಸದಸ್ಯತ್ವ ಪಡೆದುಕೊಂಡರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್.ವಿ. ಬಡಿಗೇರ, ಕಾಲೇಜಿನ ಹಳೇಯ ವಿದ್ಯಾರ್ಥಿಗಳು ಸಂಸ್ಥೆಯ ಆಸ್ತಿಯಿದ್ದಂತೆ. ಸಮಾಜದಲ್ಲಿ ಉನ್ನತ, ಉತ್ತಮ ಸ್ಥಾನ ಅಲಂಕರಿಸಿದರೆ ಅದೇಕಾಳೇಜಿಗೆ ನೀಡುವ ಕೊಡುಗೆ ಎಂದರು. ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಾದ ನಿವೃತ್ತ ಡಿ.ಎಫ್.ಮಾಬನೂರ ಹಾಗೂ ನಿವೃತ್ತ ಆರ್.ಎಂ.ಹಿರೇಮಠರನ್ನು ಸನ್ಮಾನಿಸಲಾಯಿತು. ಸುಮಾ, ಸುಧಾ, ಜ್ಯೋತಿ, ಉಮಾ ಹಾಗೂ ಚನ್ನವೀರ ಮಾತನಾಡಿದರು.

ಡಾ.ಎಸ್.ಎಂ.ತುಬಚಿ, ಡಾ.ಪಿ.ಜಿ ಕೊಪ್ಪದ, ಬಿ.ಎಚ್. ಹೂಗಾರ ಮತ್ತು ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು. ನೇತ್ರಾವತಿ ಬೇವಿನಮರದ ಪ್ರಾರ್ಥಿಸಿದರು. ಮಹೇಶ ಕುರ್ತಿಕೋಟಿ ಸ್ವಾಗತಿಸಿದರು.

Edited By : PublicNext Desk
Kshetra Samachara

Kshetra Samachara

05/10/2024 01:47 pm

Cinque Terre

6.65 K

Cinque Terre

0

ಸಂಬಂಧಿತ ಸುದ್ದಿ