ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಾಮಾಜಿಕ ಹೋರಾಟಗಾರರನ್ನು ಬಿಡುಗಡೆ ಮಾಡಿ

ಧಾರವಾಡ: ಭೀಮಾ ಕೋರೆಗಾಂವ ಸಂಭ್ರಮಾಚರಣೆ ವೇಳೆ ಬಂಧನ ಮಾಡಲಾಗಿರುವ ಸ್ವಾಮಿ ಸ್ಟ್ಯಾನ್ ಮತ್ತು ಸಾಮಾಜಿಕ ಹೋರಾಟಗಾರರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಸಮರಸ ವೇದಿಕೆ ಸದಸ್ಯರು ಸೋಮವಾರ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿ, ತಹಶೀಲ್ದಾರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಪುಣೆಯಲ್ಲಿ 2018 ರಲ್ಲಿ ಭೀಮಾ ಕೋರೆಗಾಂವ ಸಂಭ್ರಮಾಚರಣೆ ಮಾಡುತ್ತಿದ್ದ ವೇಳೆ 11 ಜನ ಸಾಮಾಜಿಕ ಹೋರಾಟಗಾರರು ಸೇರಿದಂತೆ 83 ವರ್ಷದ ಸ್ವಾಮಿ ಸ್ಟ್ಯಾನ್ ಅವರ ಮೇಲೆ ದೇಶ ವಿರೋಧಿ ಆರೋಪಗಳನ್ನು ಹೊರಿಸಿ ಬಂಧನ ಮಾಡಿರುವುದು ಖಂಡನಾರ್ಹ. 83 ವರ್ಷದ ಸ್ವಾಮಿ ಸ್ಟ್ಯಾನ್ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಲು ಹೇಗೆ ಸಾಧ್ಯ? ಕಳೆದ ನಾಲ್ಕು ದಶಕಗಳಿಂದ ಜಾರ್ಖಂಡ್ ನಲ್ಲಿರುವ ಆದಿವಾಸಿ ಜನರಿಗಾಗಿ ಅವರು ಹಗಲು ರಾತ್ರಿ ಸೇವೆ ಸಲ್ಲಿಸಿದ್ದಾರೆ. ಇಂತವರನ್ನು ಉದ್ದೇಶಪೂರ್ವಕವಾಗಿ ದೇಶ ವಿರೋಧಿ ಆಪಾದನೆ ಹೊರಿಸಿ ಬಂಧಿಸಲಾಗಿದೆ. ಅನ್ಯಾಯದ ಹಾಗೂ ಅಸಹಾಯಕರ ಪರವಾಗಿ ಯಾರು ಧ್ವನಿ ಎತ್ತುತ್ತಾರೋ ಅವರನ್ನು ಹತ್ತಿಕ್ಕುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಪ್ರಕರಣದ ತನಿಖೆಯನ್ನು ಕೂಲಂಕುಶವಾಗಿ ಪರಿಶೀಲಿಸಿ ನಿಜವಾದ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಏನೂ ತಪ್ಪು ಮಾಡದ ಹಾಗೂ ದಲಿತರ ಪರ ಧ್ವನಿ ಎತ್ತಿದ ಸ್ವಾಮಿ ಸ್ಟ್ಯಾನ್ ಹಾಗೂ ಸಾಮಾಜಿಕ ಹೋರಾಟಗಾರರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು

Edited By : Manjunath H D
Kshetra Samachara

Kshetra Samachara

19/10/2020 12:42 pm

Cinque Terre

13.97 K

Cinque Terre

0

ಸಂಬಂಧಿತ ಸುದ್ದಿ