ಧಾರವಾಡದ ಹೊಸ ಯಲ್ಲಾಪುರದಲ್ಲಿರುವ ಇರ್ಫಾನ್ ದರವಾನ್ ಎಂಬ ಒಂದೂವರೆ ವರ್ಷದ ಮಗುವಿನ ಸಂಬಂಧ ನಿಮ್ಮ ಪಬ್ಲಿಕ್ ನೆಕ್ಸ್ಟ್ ಬಿತ್ತರಿಸಿದ್ದ ವರದಿಗೆ ಸ್ಪಂದಿಸಿರುವ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಅವರು, ಆ ಕುಟುಂಬದ ನೆರವಿಗೆ ಧಾವಿಸಿದ್ದಾರೆ.
ಇರ್ಫಾನ್ ದರವಾನ್ ಎಂಬ ಒಂದೂವರೆ ವರ್ಷದ ಮಗುವಿಗೆ ಹೃದಯದ ಶಸ್ತ್ರ ಚಿಕಿತ್ಸೆಯಾಗಿತ್ತು. ಆದರೆ, ಶಸ್ತ್ರ ಚಿಕಿತ್ಸೆ ವಿಫಲವಾಗಿದ್ದರಿಂದ. ಆ ಮಗು ಸಾವು- ಬದುಕಿನ ಮಧ್ಯೆ ಹೋರಾಡುತ್ತಿದೆ. ಅಲ್ಲದೇ ಆ ಮಗುವಿಗೆ ಪ್ರತಿ ತಿಂಗಳು 30 ರಿಂದ 40 ಸಾವಿರ ಖರ್ಚು ಮಾಡಿ ಚಿಕಿತ್ಸೆ ಕೊಡಿಸಲೇ ಬೇಕಿದೆ.
ಈ ಸಂಬಂಧ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಪ್ರಸಾರ ಮಾಡಿತ್ತು. ವರದಿ ನೋಡಿದ ಅನೇಕ ದಾನಿಗಳು ಈಗಾಗಲೇ ಆ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ. ಇದೀಗ ದೀಪಕ ಚಿಂಚೋರೆ ಕೂಡ ಆ ಮಗುವಿನ ಮನೆಗೆ ಭೇಟಿ ನೀಡಿ ಮಗುವಿನ ತಂದೆ ಅಸ್ಲಾಂ ಅವರಿಗೆ 10 ಸಾವಿರ ಧನ ಸಹಾಯ ಮಾಡಿ, ಪ್ರತಿ ತಿಂಗಳು ಆ ಮಗುವಿನ ಚಿಕಿತ್ಸೆಗೆ ಕೈಲಾದ ಸಹಾಯ ಮಾಡುವ ಭರವಸೆ ನೀಡಿದ್ದಾರೆ.
ಅಲ್ಲದೇ, ಎಲ್ಲರೂ ತಮ್ಮ ಕೈಲಾದಷ್ಟು ಸಹಾಯವನ್ನು ಈ ಕಂದಮ್ಮನ ಕುಟುಂಬಕ್ಕೆ ಮಾಡಬೇಕು. ಇಲ್ಲಿ ಮಾನವೀಯತೆ ಮುಖ್ಯ ಎಂದು ಚಿಂಚೋರೆ ಪಬ್ಲಿಕ್ ನೆಕ್ಸ್ಟ್ ಮೂಲಕ ಮನವಿ ಮಾಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/08/2022 05:15 pm