ನವಲಗುಂದ : ಹಳ್ಳಿ ಹಳ್ಳಿ ಗಲ್ಲಿ ಗಲ್ಲಿಗಳಲ್ಲಿ ಬಿಜೆಪಿ ಬೆಳೆಯುತ್ತಿದೆ. ವಿಶ್ವಾಸ ಇದೆ 150ರ ಸಂಕಲ್ಪ ಮುಟ್ಟಿಕೊಂಡಿದೆ. ಮೊದಲ ವಿಜಯ ಯಾತ್ರೆ ಇಲ್ಲಿದಂಲೇ ಆರಂಭವಾಗುತ್ತೆ, ನವಲಗುಂದ ಕ್ಷೇತ್ರ ಕಾಂಗ್ರೆಸ್ ಮುಕ್ತವಾಗಿದೆ ಎಂದು ನವಲಗುಂದ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿದರು.
ಮೊದಲ ವಿಜಯ ಯಾತ್ರೆ ಇಲ್ಲಿಂದಲೇ ಆರಂಭವಾಗುತ್ತೆ, ನವಲಗುಂದ ಕ್ಷೇತ್ರ ಕಾಂಗ್ರೆಸ್ ಮುಕ್ತವಾಗಿದೆ. ಶ್ರೀಲಂಕಾ ಪತನ ಆದಾಗ ಮೋದಿ ಅವರಿಗೆ ಶಕ್ತಿ ನೀಡಿದ್ರು, ಈದ್ಗಾ ಮೈದಾನದಲ್ಲಿ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಧ್ವಜಾರೋಹಣ ಆಗಿದೆ. ಉಕ್ರೇನ್ ಹಾಗೂ ರಷ್ಯಾ ಸಹ ನಮ್ಮ ಧ್ವಜಕ್ಕೆ ಸೆಲ್ಯೂಟ್ ಹೊಡೆಯುತ್ತಾರೆ. ಪಾಕಿಸ್ತಾನದ ಲೋಕಸಭೆಯಲ್ಲಿ ಸಹ ಜೈಕಾರ ಹಾಕುವ ಮಟ್ಟಿಗೆ ಭಾರತ ಎದ್ದು ನಿಂತಿದೆ.
6 ಗಂಟೆಗಳ ಕಾಲ ರಷ್ಯಾ ಯುದ್ಧ ನಿಲ್ಲಿಸಿ ವಿದ್ಯಾರ್ಥಿಗಳನ್ನ ಕರೆತಂದರು ಮೋದಿ, ಕೇವಲ ಭಾರತ ಅಷ್ಟೇ ಅಲ್ಲ ಅಕ್ಕಪಕ್ಕದ ನೆರೆ ರಾಷ್ಟ್ರಗಳಿಗೂ ನೆರವು ನೀಡಿದ್ದು ಮೋದಿ, 60 ವರ್ಷ ಸುಧೀರ್ಘ ಅವಧಿಯಲ್ಲಿ ಕಾಂಗ್ರೆಸ್ ಭಿಕ್ಷುಕರ ಕಾಲ ಮಾಡಿತ್ತು. ಇದೀಗ ಯೋಗವನ್ನ ಎಲ್ಲ ರಾಷ್ಟ್ರಗಳು ಮಾಡುತ್ತಿವೆ. ಚೀನಾ ಭಾರತದ ಆಕ್ರಮಣಕ್ಕೆ ಬಂದು ವಾಪಾಸ್ ಹೋಗಿದೆ.
ಈ ಹಿಂದೆ ಇದ್ದ ಶಂಡ ಭಾರತ ನಮ್ಮದಲ್ಲ. ಈಗ ಎಲ್ಲದಕ್ಕೂ ಉತ್ತರ ಕೊಡುವ ಭಾರತ ನಿರ್ಮಾಣ ಆಗಿದೆ. ಗಾಂಧಿಯ ಹೆಸರಲ್ಲಿ ಕಾಂಗ್ರೆಸ್ ಜನರಿಗೆ ಟೋಪಿ ಹಾಕಿತು. ಆದ್ರೆ ಬಿಜೆಪಿ ಗಾಂಧಿಯ ರಾಮ ರಾಜ್ಯ ನೀಡಲು ಮುಂದಾಗಿದೆ. ಭಾರತ ಮಾತಾ ಕಿ ಜೈ ಅಂತ ಒಮ್ಮೆಯೂ ಕಾಂಗ್ರೆಸ್ ಹೇಳಿಲ್ಲ. ಬದಲಾಗಿ ಇಂದಿರಾ ಗಾಂಧಿಜಿ ಜೈ ಎನ್ನುತ್ತಾರೆ. ವ್ಯಕ್ತಿ ಪೂಜೆಯನ್ನ ನಾವು ಯಾವತ್ತೂ ಮಾಡಿಲ್ಲ. ಕಾಂಗ್ರೆಸ್ ಪಾರ್ಟಿ ಗುಲಾಮಗಿರಿಯಲ್ಲಿ ಬದುಕಿದೆ.
ದಾವೂದ್ ಇಬ್ರಾಹಿಂ ಪಲಾಯನ ಆಗಲು ಕಾಂಗ್ರೆಸ್ ಪ್ರೇರಣೆ ನೀಡಿದ್ದು, ಬಾಂಬ್ ಸ್ಪೋಟಗಳು ಆಗ ಆಗುತ್ತಿತ್ತು. ಆದ್ರೆ ಈಗ ಅದ್ಯಾವುದು ಆಗುತ್ತಿಲ್ಲ. ರಾಹುಲ್ ಗಾಂಧಿ, ಇಂದಿರಾ ಗಾಂಧಿ ಅಲ್ಲ ಮತ ಬ್ಯಾಂಕ್ ಗೋಷ್ಕರ ಸಿದ್ದರಾಮಯ್ಯ ಗೋ ಹಂತಕನ ಹತ್ಯೆಯಾದಾಗ ಕಣ್ಣೀರು ಹಾಕಿದ್ರು, ಆದ್ರೆ ಹಿಂದೂ ಗಳ ಹತ್ಯೆಯಾದಾಗ ಕಣ್ಣೀರು ಹಾಕಿಲ್ಲ ಅವರು PFI ರಾಜ್ಯದಲ್ಲಿ ಚಟುವಟಿಕೆ ಮಾಡಲು ಬಿಡುವುದಿಲ್ಲ.
ತನ್ವಿರ್ ಶೇಟ್ ಮೇಲೆ ಹಲ್ಲೆ ಆದಾಗ ಅವರ ವಿರುದ್ಧ ಮಾತಾಡಲಿಲ್ಲ. ಜಿನ್ನಾ ನೇತೃತ್ವದಲ್ಲಿ ಷಡ್ಯಂತ್ರ ಆಗಿದೆ. ಕಾಂಗ್ರೆಸ್ ಕೇವಲ ದೇಶವನ್ನ ವಿಭಜನೆ ಮಾಡಿಲ್ಲ. ಜನರನ್ನ ಮತ, ಜಾತಿ, ಭಾಷೆ, ಜನಗಳನ್ನ ಒಡೆಯುವ ಕಾರ್ಯ ಕಾಂಗ್ರೆಸ್ ಕಾರಣ ಸಿದ್ದರಾಮಣ್ಣ ವೀರಶೈವ ಲಿಂಗಾಯತರನ್ನ ಒಡೆದಿದ್ದು ನೀಚಣ್ಣ, ಮೋದಿ ಬಂದ ಮೇಲೆ ಎಲ್ಲವನ್ನ ಜೋಡಿಸುವ ಕಾರ್ಯ ಮಾಡುತ್ತಿದ್ದಾರೆ.
ಮಂದಿರ ಇವತ್ತು ಮೋದಿ ಕಾಲಘಟ್ಟದಲ್ಲಿ ಶಿಲಾನ್ಯಾಸ ಆಗಿದೆ. ಭಾರತ ಜೋಡೊ ಮಾಡಿದ್ದು ವಾಜಪೇ ಹಾಗೂ ಪ್ರಧಾನಿ ಮೋದಿ, ಆಗಮಿಸಿದ ನಳೀನ್ ಕುಮಾರ ಕಟೀಲ್ ಅವರು ಬಂಡಾಯದ ನಾಡಿನ ರೈತ ಹುತಾತ್ಮ ವೀರ ಗಲ್ಲಿಗೆ ಗೌರವ ಸೂಚಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
12/10/2022 10:46 pm