ಹುಬ್ಬಳ್ಳಿ : ಅಧಿಕಾರಿಶಾಹಿಗಳ ಮತ್ತು ಕೆಲವು ರಾಜಕೀಯ ವ್ಯಕ್ತಿಗಳ ಅಸಹಕಾರದಿಂದಾಗಿ ಬಿಯೋಂಡ್ ಬೆಂಗಳೂರು ಕಲ್ಪನೆಯ ಯೋಜನೆಗಳು ವೇಗ ಪಡೆಯುತ್ತಿಲ್ಲವೆಂದು ರಾಜ್ಯ ಸರ್ಕಾರದ ಮೇಲೆ ಅವರದೇ ಪಕ್ಷದ ಶಾಸಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಸಮಾಧಾನ ಹೊರ ಹಾಕಿದರು.
ನಗರದ ಖಾಸಗಿ ಹೊಟೇಲ್ ದಲ್ಲಿ ಬಿಯೋಂಡ್ ಬೆಂಗಳೂರು ಟೆಕ್ಲಿರೇಷನ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಕ್ಲಸ್ಟರ್ ಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉದ್ಯಮಗಳಿಗೆ ಪ್ರೋತ್ಸಾಹದ ಕೊರತೆ ಕಾಣುತ್ತಿದೆ. ಮೂರು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಿತು. ಆದರೆ ಅದರಲ್ಲಿ ಪಾಲ್ಗೊಂಡ ಕೈಗಾರಿಕೆಗಳಿಗೆ ಕೆಳಮಟ್ಟದ ಸಹಕಾರದ ಕೊರತೆಯಿದೆ. ಸಿಂಗಲ್ ವಿಂಡೋ ಸಿಸ್ಟಮ್ ಪರಿಣಾಮಕಾರಿಯಾಗಿ ಜಾರಿಯಾಗಬೇಕಿದೆ. ಬಿಯೋಂಡ್ ಬೆಂಗಳೂರು ಯೋಜನೆ ಮೂಲಕ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ತ್ರೀವಳಿ ನಗರವನ್ನು ಗಮನಕ್ಕೆ ತೆಗೆದುಕೊಂಡು ಕೈಗಾರಿಕೆಗಳು ತೆರೆಯಲು ಪ್ರೋತ್ಸಾಹಿಸಬೇಕು ಎಂದರು.
ಬಿಯೋಂಡ್ ಬೆಂಗಳೂರಿನಿಂದಾಗಿ ಹೆಚ್ಚಿನ ಕಂಪನಿಗಳು ಉತ್ತರ ಕರ್ನಾಟಕಕ್ಕೆ ಬರುತ್ತಿವೆ. ಹೀಗಾಗಿ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಆಗಬೇಕಿದೆ. ಅಲ್ಲದೇ ಬೆಲೆಕೇರಿ ಬಂದರು ಅಭಿವೃದ್ಧಿಯಾಗಬೇಕು. ಇದರಿಂದ ಉತ್ತರ ಕರ್ನಾಟಕದ ಸರಕು ಸಾಗಾಣಿಕೆಗೆ ಅನುಕೂಲವಾಗುವುದು.
ಉಡಾನ್ ಯೋಜನೆಯಿಂದ ಈಗಾಗಲೇ ವಿಮಾನಯಾನ ಅಭಿವೃದ್ಧಿ ಹೊಂದಿದೆ. ಗುಲ್ಬರ್ಗ, ಬೀದರ್ ನಗರಗಳು ವಿಮಾನಯಾನಕ್ಕೆ ತೆರೆದುಕೊಂಡಿವೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/10/2022 07:34 pm