ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಐಟಿ ಕೈಗಾರಿಕೆಗಳಿಂದ 4 ಸಾವಿರ ಜನರಿಗೆ ಉದ್ಯೋಗ ಸಿಕ್ಕಿದೆ; ಕೇಂದ್ರ ಸಚಿವ ಜೋಶಿ

ಹುಬ್ಬಳ್ಳಿ: ಟೈರ್ ಟೂ ಸಿಟಿಗಳಲ್ಲಿ ಐಟಿ ಸೇರಿ ವಿವಿದ ಕೈಗಾರಿಗೆಗಳು ಬರಬೇಕು. ಹುಬ್ಬಳ್ಳಿ ಧಾರವಾಡಕ್ಕೆ ಅದೇ ರೀತಿ ಹಲವು ಕೈಗಾರಿಕೆಗಳು ಬಂದಿವೆ. ಇದರಿಂದ 4 ಸಾವಿರ ಜನರಿಗೆ ಉದ್ಯೋಗ ಸಿಕ್ಕಿದೆ. ಇದಕ್ಕೆ ಬೇಕಾದ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಕಷ್ಟು ತೊಂದರೆ ಬಂದರೂ ಅಭಿವೃದ್ಧಿ ಮಾಡಲಿಕ್ಕೆ ಪ್ರಯತ್ನ ನಡೆಸಿದ್ದೇವೆ. ಇದರಿಂದ ಕೈಗಾರಿಕೆಗಳು ಬರಲು ಮತ್ತು ಸಾಕಷ್ಟು ಪ್ರಮಾಣದಲ್ಲಿ ಸ್ಥಾಪನೆ ಮಾಡಲು ಅನುಕೂಲ ಆಗತ್ತದೆ ಎಂದರು.

ಇನ್ನು ಹುಬ್ಬಳ್ಳಿ ದೆಹಲಿ ವಿಮಾನ ಹಾರಾಟದ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಅದರ ಬಗ್ಗೆ ಮಾತನಾಡಿದ್ದೇನೆ. ನಾಳೆ ದೆಹಲಿಗೆ ಹೋಗಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಆದಷ್ಟು ಕಾರ್ಯರೂಪಕ್ಕೆ ತರಲಾಗುತ್ತದೆ ಎಂದು ಹೇಳಿದರು.

Edited By : Nagesh Gaonkar
Kshetra Samachara

Kshetra Samachara

03/10/2022 06:49 pm

Cinque Terre

33.94 K

Cinque Terre

7

ಸಂಬಂಧಿತ ಸುದ್ದಿ