ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: RSS ಬ್ಯಾನ್ ವಿಚಾರ ಸಿದ್ದರಾಮಯ್ಯ ಈ ಮಟ್ಟಿಗೆ ಇಳಿಬಾರದು; ಸಿಎಂ ಬೊಮ್ಮಾಯಿ ಕಿಡಿ

ಹುಬ್ಬಳ್ಳಿ: RSS ಬ್ಯಾನ್ ಮಾಡಬೇಕು ಅನ್ನೋದೆ ಒಂದು ದೊಡ್ಡ ದುರ್ದೈವ. ಸಿದ್ದರಾಮಯ್ಯ ಈ ಮಟ್ಟಕ್ಕೆ ಇಳಿಬಾರದಿತ್ತು. RSS ಒಂದು ದೇಶಪ್ರೇಮಿ ಸಂಘಟನೆ RSS ಬ್ಯಾನ್ ಮಾಡಬೇಕು ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರತಿಕ್ರೀಯೆ ನೀಡಿದರು.

ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ PFI ಯಾಕೆ ಬ್ಯಾನ್ ಮಾಡೀದಿರಿ ಅಂತಾ ಕೇಳೋಕೆ ಅವರ ಬಳಿ ಆಧಾರವಿಲ್ಲ. ಈ ಹಿಂದೆ ಅವರೇ PFI ಕೇಸ್ ಗಳನ್ನ ವಾಪಸ್ ತಗೆದುಕೊಂಡಿದ್ದಾರೆ. ಅದನ್ನ ಮರೆಮಾಚೋಕೆ RSS ಬ್ಯಾನ್ ಮಾಡಬೇಕು ಅಂತಿದ್ದಾರೆ. RSS ದೇಶಪ್ರೇಮಿಗಳ ಸಂಘಟನೆ, ದೀನ ದಲಿತರಿಗೆ,ಬಡವರಿಗೆ ಸಹಾಯ ಮಾಡಿದ ಸಂಘಟನೆ. ಪ್ರವಾಹ ಬಂದಾಗ ಮುಂದೆ ನಿಂತು ಕೆಲಸ ಮಾಡೋ ಸಂಘಟನೆ. ದೇಶದಲ್ಲಿ ದೇಶಪ್ರೇಮ ಜಾಗೃತಿ ಮಾಡೋ ಸಂಘಟನೆ ಇದು. ಇಂತಹ ಸಂಘಟನೆ ಬ್ಯಾನ್ ಮಾಡಬೇಕು ಅನ್ನೋದೆ ದುರ್ದೈವ ಎಂದ ಬಸವರಾಜ್ ಬೊಮ್ಮಾಯಿ ಅವರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/09/2022 11:26 am

Cinque Terre

49.17 K

Cinque Terre

19

ಸಂಬಂಧಿತ ಸುದ್ದಿ