ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬ್ರಿಟಿಷರ ಲಾಠಿಗೇ ಹೆದರಿಲ್ಲ, ನಿಮ್ಮ RSS ಲಾಠಿಗೆ ಹೆದರ್ತೀವಾ?: ಉಳ್ಳಾಗಡ್ಡಿಮಠ

ಧಾರವಾಡ: ಪೇ ಮೇಯರ್ ಎಂಬ ಅಭಿಯಾನ ಆರಂಭಿಸಿದ್ದಕ್ಕೆ ಮೇಯರ್ ಈರೇಶ ಅಂಚಟಗೇರಿ ಅವರು ತಮ್ಮ ಮೇಲೆ ದೂರು ನೀಡಿದ್ದಕ್ಕೆ ಕಾಂಗ್ರೆಸ್ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ತಿರುಗೇಟು ನೀಡಿದ್ದಾರೆ.

ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಪತಿಗಳ ಪೌರ ಸನ್ಮಾನ ಕಾರ್ಯಕ್ರಮಕ್ಕೆ ಮೇಯರ್ ಮೈದಾನ ಹಾಗೂ ಊಟವನ್ನು ಫ್ರೀಯಾಗಿ ಪಡೆದುಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಒಂದೂವರೆ ಕೋಟಿ ಖರ್ಚು ಮಾಡುವ ಅವಶ್ಯಕತೆ ಏನಿತ್ತು. ಪೇ ಮೇಯರ್ ಅಭಿಯಾನ ಆರಂಭಿಸಿದ್ದು ನಾವಲ್ಲ. ಇದನ್ನು ಸಾರ್ವಜನಿಕರೇ ಆರಂಭಿಸಿದ್ದಾರೆ.

ನಿಮ್ಮ ಬಳಿ ಲೆಕ್ಕ ಇದ್ದರೆ ಲೆಕ್ಕ ಕೊಡಿ ಅದನ್ನು ಬಿಟ್ಟು ದೂರು ನೀಡುವುದು ಮತ್ತೊಂದು ಮಾಡುವುದು ಸರಿಯಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ್ ಲಾಠಿ ಏಟಿಗೆ ನಮ್ಮ ಕಾಂಗ್ರೆಸ್ ಹೆದರಿಲ್ಲ. ಇನ್ನು ನಿಮ್ಮ ಆರ್‌ಎಸ್‌ಎಸ್ ಲಾಠಿಗೆ ಹೆದರುತ್ತೇವಾ? ಎಂದು ಸವಾಲ್ ಹಾಕಿದ್ದಾರೆ.

ಪೇ ಮೇಯರ್ ಅಭಿಯಾನವನ್ನು ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಇನ್ನೂ ಕೈಗೆತ್ತಿಕೊಂಡಿಲ್ಲ. ಹಾಗೇನಾದರೂ ಕೈಗೆತ್ತಿಕೊಂಡರೆ ನಾಳೆ ನಿಮ್ಮ ಕಚೇರಿ, ನಿಮ್ಮ ವಾಹನ ಅಷ್ಟೆ ಏಕೆ ನಿಮ್ಮ ಬೆನ್ನಿಗೆ ಪೇ ಮೇಯರ್ ಸ್ಟಿಕರ್ ಅಂಟಿಸಿದರೂ ನೀವು ಅಚ್ಚರಿಪಡಬೇಕಾಗಿಲ್ಲ. ನೀವು ಸಾರ್ವಜನಿಕರ ದುಡ್ಡನ್ನು ನುಂಗಿ ನೀರು ಕುಡಿದಿದ್ದೀರಿ. ನಿಮ್ಮ ಬಳಿ ಲೆಕ್ಕ ಇದ್ದರೆ ಲೆಕ್ಕ ಕೊಡಿ ಇಲ್ಲ ಅಂದರೆ ರಾಜೀನಾಮೆ ಕೊಟ್ಟು ಹೊರನಡೆಯಿರಿ ಎಂದರು.

Edited By : Nagesh Gaonkar
Kshetra Samachara

Kshetra Samachara

29/09/2022 10:34 pm

Cinque Terre

87.94 K

Cinque Terre

44

ಸಂಬಂಧಿತ ಸುದ್ದಿ