ಧಾರವಾಡ: ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಯಾರು ಅನ್ನೋದು ನಮ್ಮ ಶಾಸಕರಾದಂತಹ ಅರವಿಂದ ಬೆಲ್ಲದ ಸಾಹೇಬ್ರಿಗೆ ಗೊತ್ತಿಲ್ಲ ಅಂತ ಕಾಣಸ್ತೈತಿ. ಬ್ಯಾನರ್ ಹಾಕಿಸೋ ಗದ್ದಲದಾಗ ದ್ರೌಪದಿ ಮುರ್ಮು ಅವರು ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಅಂತಾ ಬರಿಸಿ ಹಾಕಿಸ್ಯಾರ.
ಪ್ರತಿಭಾ ಪಾಟೀಲ ಅವರು ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಆಗಿದ್ರು ಅನ್ನೋದು ಅವರಿಗೆ ಗೊತ್ತಿಲ್ಲ ಅಂತ ಕಾಣಸ್ತೈತಿ. ಇವತ್ತ ಧಾರವಾಡದ ಐಐಐಟಿ ಉದ್ಘಾಟನೆ ಮಾಡಾಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬರಾಕತ್ತಾರ. ಅವರಿಗೆ ಸ್ವಾಗತ ಕೋರಿ ನಮ್ಮ ಬೆಲ್ಲದ ಸಾಹೇಬ್ರು ಅಲ್ಲಲ್ಲಿ ತಮ್ಮ ಬ್ಯಾನರ್ ಹಾಕಿಸ್ಯಾರ. ಅದರಾಗ ದ್ರೌಪದಿ ಮುರ್ಮು ಅವರು ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಅಂತ ಕಣ್ಣ ಕುಕ್ಕುವಂಗ ಬರಿಸ್ಯಾರ. ಇದನ್ನ ನೋಡಿ ಪ್ರಜ್ಞಾವಂತ ನಾಗರಿಕರು ಮುಸಿ ಮುಸಿ ನಗಾಕತ್ತಾರ. ಬೆಲ್ಲದ ಸಾಹೇಬ್ರ, ನಮ್ಮ ದೇಶದ ಮೊದಲ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅಲ್ರಿ, ಪ್ರತಿಭಾ ಪಾಟೀಲ ಅದಾರ. ಇನ್ನರ ತಿಳಕೋರಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/09/2022 10:37 am