ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಸಿಗದ ಗೌರವ; ಪೌರ ಸನ್ಮಾನ ಬಹಿಷ್ಕರಿಸಲು ಕಾಂಗ್ರೆಸ್ ನಿರ್ಧಾರ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ‌ಪಾಲಿಕೆ‌ ಆಯೋಜಿಸಿರುವ ರಾಷ್ಟ್ರಪತಿಗಳ ಪೌರಸನ್ಮಾನ ಕಾರ್ಯಕ್ರಮ ಬಹಿಷ್ಕರಿಸಲು ಪಾಲಿಕೆಯ ವಿರೋಧ ಪಕ್ಷ ಕಾಂಗ್ರೆಸ್ ನಿರ್ಧಾರ ಕೈಗೊಂಡಿದೆ.

ಹೌದು. ಈ ಕುರಿತು ತುರ್ತು ಸುದ್ದಿಗೋಷ್ಠಿ ನಡೆಸಿದ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರು, ರಾಷ್ಟ್ರಪತಿಯರ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲಿಕೆ ಪ್ರತಿಪಕ್ಷದ ಕಾಂಗ್ರೆಸ್ ಸದಸ್ಯರನ್ನು ಕಡೆಗಣನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರೆಲ್ಲರೂ ರಾಷ್ಟ್ರಪತಿಗಳ ಪೌರ ಸನ್ಮಾನ ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧಾರ ಮಾಡಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ.‌ ಎಲ್ಲದರಲ್ಲೂ ಬಿಜೆಪಿ ಸದಸ್ಯರಿಗೆ ಮಾತ್ರ ಅವಕಾಶ ನೀಡಲಾಗಿದೆ. ಪೌರ ಸನ್ಮಾನ ಕಾರ್ಯಕ್ರಮವನ್ನು ಬಿಜೆಪಿ ಪಕ್ಷದ ಕಾರ್ಯಕ್ರಮ ಮಾಡಲಾಗುತ್ತಿದೆ. ಕಾರ್ಯಕ್ರಮ ಯಶಸ್ಸಿನ ಸಲುವಾಗಿ ಎಲ್ಲ ಕಾರ್ಪೋರೆಟರ್ ಗಳ ಒಳಗೊಂಡು ವಿವಿಧ ಕಮಿಟಿ ರಚಿಸಲಾಗುತ್ತದೆ ಎಂದು ಮೇಯರ್ ತಿಳಿಸಿದ್ದರು. ಆ ಕೆಲಸ ಮಾಡಲಿಲ್ಲ, ಪ್ರತಿ ಹಂತದಲ್ಲಿ ಪ್ರತಿಪಕ್ಷದವರನ್ನು ಕಡೆಗಣಿಸುತ್ತ ಬಂದಿದ್ದಾರೆ. ರಾಷ್ಟ್ರಪತಿ ಅವರೊಂದಿಗೆ ಫೋಟೋ ಸೇಷನ್ ಇತ್ತು. ಅದಕ್ಕೂ ಈಗ ಅವಕಾಶ ಇಲ್ಲ. ಜಾಹೀರಾತು ಬ್ಯಾನರ್‌ಗಳಲ್ಲೂ ಕಾಂಗ್ರೆಸ್ ಸದಸ್ಯರನ್ನು ಕಡೆಗಣಿಸುವ ಮೂಲಕ ಅವಮಾನಿಸಿಲಾಗಿದೆ ಎಂದು ದೂರಿದರು.

ಪೌರಸನ್ಮಾನ ಹೆಸರಿನಲ್ಲಿ ದುಂದು ವೆಚ್ಚ ಮಾಡಲಾಗುತ್ತಿದೆ. ಪೆಂಡಾಲ್ ಹಾಕಿದ ಮೇಲೆ ಕೊಟೇಶನ್ ಕರೆಯಲಾಗಿದೆ. ಇದರಲ್ಲೂ ಅವ್ಯವಹಾರವಾಗಿದೆ ಎಂದು ಪಾಲಿಕೆ ಕಾಂಗ್ರೆಸ್ ಸದಸ್ಯರ ಆರೋಪಿಸಿದರು.

Edited By : Nagesh Gaonkar
Kshetra Samachara

Kshetra Samachara

26/09/2022 08:46 am

Cinque Terre

29.71 K

Cinque Terre

16

ಸಂಬಂಧಿತ ಸುದ್ದಿ