ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವೆ ಸಿಎಂ ರೇಸ್ ಪ್ರಾರಂಭವಾಗಿದೆ; ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಬಿಜೆಪಿಯ ಜನಸ್ಪಂದನಾ ಕಾರ್ಯಕ್ರಮದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಸಿದ್ದರಾಮೋತ್ಸವವನ್ನು ಪುಕ್ಕಟ್ಟೆಯಾಗಿ ಮಾಡಿದ್ದಾರೆಯೇ ಎಂದು ಹೇಳುವ ಮೂಲಕ ಬಿಜೆಪಿ ಜನಮರ್ದನ ಸರ್ಕಾರ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟಾಂಗ್ ಕೊಟ್ಟಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಐದು ವರ್ಷ ಆಡಳಿತ ನಡೆಸಿದವರು. ಆಗ ಅವರಿಗೆ ಏನೂ ಆಯ್ತು ಅದನ್ನು ಅರಿತು ಮಾತನಾಡಬೇಕು. ಇದೇ ಸಿದ್ದರಾಮಯ್ಯ ನೇತೃತ್ವದಲ್ಲಿ 2018 ರಲ್ಲಿ ಚುನಾವಣೆಗೆ ಕಾಂಗ್ರೆಸ್ ಹೋದಾಗ 120 ಸೀಟ್ ಇದ್ದ ಕಾಂಗ್ರೆಸ್ 67-68 ಸೀಟಿಗೆ ಬಂದಿದ್ದಾರೆ. ಹಾಗಾಗಿ ಜನರು ಯಾರಿಗೆ ಮರ್ದನ ಮಾಡಿದ್ದಾರೆ ಎಂಬುದನ್ನು ದೇಶದಲ್ಲಿ ಕಾಣುತ್ತಿದೆ ಎಂದರು.

ಸಿದ್ದರಾಮಯ್ಯ ಅವರು ಜನಸ್ಪಂದನ ಕಾರ್ಯಕ್ರಮವನ್ನು ಹಣ ಖರ್ಚು ಮಾಡಿ ಮಾಡಿದ್ದಾರೆ ಎಂದು ಮಾತಾಡಿದ್ದಾರೆ. ಹಾಗಾದರೇ ಸಿದ್ದರಾಮೋತ್ಸವವನ್ನು ಪುಕ್ಕಟಾಗಿ ಮಾಡಿದ್ದಾರೆಯೇ ಎಂದು ಜೋಶಿ ಪ್ರಶ್ನೆ ಮಾಡಿದರು.

ಡಿಕೆಶಿವಕುಮಾರ ಮತ್ತು ಸಿದ್ದರಾಮಯ್ಯ ನಡುವೆ ಸಿಎಂ ರೇಸ್ ಪ್ರಾರಂಭವಾಗಿದೆ. ಹಾಗಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಲು ಸುಮ್ಮನೆ ರಾಜಕೀಯವಾಗಿ ಮಾತನಾಡುತ್ತಾರೆ ಎಂದರು.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/09/2022 07:26 pm

Cinque Terre

180.04 K

Cinque Terre

27

ಸಂಬಂಧಿತ ಸುದ್ದಿ