ಹುಬ್ಬಳ್ಳಿ : ಕಾಂಗ್ರೆಸ್ ಭಾರತ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಆದರೇ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಚೋಡೋ ಯಾತ್ರೆಯಲ್ಲಿ ಮಗ್ನರಾಗಿದ್ದಾರೆ. ಮೊದಲು ಕಾಂಗ್ರೆಸ್'ನವರು ಪಕ್ಷ ಚೋಡೋ ಅದನ್ನು ಮಾಡಿಕೊಳ್ಳಬೇಕಿದೆ ಇಲ್ಲವಾದರೆ ಪಕ್ಷದ ಬೋರ್ಡ್ ಹಾಕಲು ಕಾರ್ಯಕರ್ತರು ಸಿಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವ ಹೀನವಾಗಿದೆ, ಸಂಘಟನೆಗೆ ಸಂಬಂಧ ಇಲ್ಲದಿರುವ ಹೇಳಿಕೆ ನೀಡುತ್ತಿದ್ದಾರೆ. ಕೋವಿಡ್ ಬಂದಾಗ, 75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಜನರ ಭಾವನೆಗಳನ್ನು ಕೂಡಿಸುವ ಪ್ರಯತ್ನವನ್ನು ಮೋದಿಯವರು ಮಾಡಿದ್ದಾರೆ.
ಕಾಂಗ್ರೆಸ್'ನವರಿಗೆ ಈಗ ಅವಶ್ಯಕತೆ ಇರುವುದು ಪಕ್ಷ ಜೋಡಿಸುವುದು. ಕಾಂಗ್ರೆಸ್'ಗೆ ನೀತಿ, ನೇತೃತ್ವ, ನಿಯತ್ತಿನ ಅವಶ್ಯಕತೆ ಇದೆ. ಇಲ್ಲವಾದರೆ ಪಕ್ಷಗಳು ಉಳಿದಿರುವ ಉದಾಹರಣೆ ಇಲ್ಲ ಎಂದರು.
ಹಿಮಾಚಲ, ಮಧ್ಯಪ್ರದೇಶ ಚುನಾವಣೆ ಫಲಿತಾಂಶ ಬಂದರೆ ಸಾಕಷ್ಟು ಕಾಂಗ್ರೆಸ್ ನಾಯಕರು ನಮ್ಮ ಪಕ್ಷಕ್ಕೆ ಬರ್ತಾರೆ. ನವೆಂಬರ್ ನಂತರ ನಮ್ಮ ರಾಜ್ಯದಲ್ಲಿ ಅನೇಕ ನಾಯಕರು ಕಾಂಗ್ರೆಸ್ ತೊರೆಯಲಿದ್ದಾರೆ. ಯಾರು ಸಹ ಆತ್ಮಹತ್ಯೆಯ ಹಾದಿ ಹಿಡಿಯಲು ಮನಸ್ಸು ಮಾಡುವುದಿಲ್ಲ. ರಾಜ್ಯಾಧ್ಯಕ್ಷರ ಬದಲಾವಣೆ ಸದ್ಯಕ್ಕೆ ಇಲ್ಲ. ನಮ್ಮದು ವಂಶಪಾರಂಪರೆಯ ಪಕ್ಷ ಅಲ್ಲ. ಪ್ರತಿ ಮೂರು ವರ್ಷಕ್ಕೊಮ್ಮೆ ನಮ್ಮ ಪಕ್ಷದ ಅಧ್ಯಕ್ಷರ ಚುನಾವಣೆ ನಡೆದಿದ್ದ ಇದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಭಾರತ ಜೋಡೋ ಮುಂದಿನ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ. ಭಾರತ ಜೋಡೋದಿಂದ ನಮಗೆ ಯಾವುದೇ ಭಯವಿಲ್ಲ. ಕಾಂಗ್ರೆಸ್ ಬಗ್ಗೆ ನಮಗೆ ಮರುಕ ಇದೆ, ಭಯವಿಲ್ಲ. ಆ ಪಕ್ಷದಲ್ಲಿ ಇರುವವರು ಆದಷ್ಟು ಬೇಗ ಆ ಪಕ್ಷ ತೊರೆಯಲಿ. ನಮ್ಮಲ್ಲಿ ನೀತಿಯೂ ಇದೆ, ನೇತೃತ್ವವೂ ಇದೆ ಎಂದರು.
ಯಡಿಯೂರಪ್ಪನವರನ್ನು ಬಿಜೆಪಿ ಕಡೆಗಣನೆ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಬಿಜೆಪಿ ಬೆಳೆಸಿದ ನಾಯಕರು. ಬಿಜೆಪಿ ಯಡಿಯೂರಪ್ಪನವರು ಬೆಳೆಸಿದ ಪಕ್ಷ. ಯಡಿಯೂರಪ್ಪನವರನ್ನ ಕಟ್ಟಿ ಹಾಕವವರು ಯಾರು ಇಲ್ಲಾ. ಯಡಿಯೂರಪ್ಪನವರ ಪ್ರವಾಸ ಯೋಜನೆ ನಿಶ್ಚಿತವಾಗಿದೆ. ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವರ ನೇತೃತ್ವದಲ್ಲಿ ಚುನಾವಣೆ ಎದುರುಸುತ್ತೆವೆ, ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಚುನಾವಣೆ ನಡೆಯುತ್ತದೆ ಎಂದು ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/09/2022 08:03 pm