ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಬ್ಯಾನರ್ ಅಳವಡಿಕೆ: ಪಾಲಿಕೆ ಷರತ್ತುಗಳನ್ನೇ ಗಾಳಿಗೆ ತೂರಿದ ಹಿಂದೂ ಕಾರ್ಯಕರ್ತರು

ಹುಬ್ಬಳ್ಳಿ: ಮಹಾನಗರ ಪಾಲಿಕೆ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಿದ್ದರ ಹಿನ್ನಲೆಯಲ್ಲಿ, ಇಂದು ಗಣಪತಿ ಪ್ರತಿಷ್ಟಾಪನೆ ಮಾಡಿದ್ದಾರೆ. ಆದ್ರೆ ಪಾಲಿಕೆ ಕೆಲವೊಂದು ಷರತ್ತುಗಳನ್ನು ಅಳವಡಿಸಿದರೂ ಕೂಡ ಕಾರ್ಯಕರ್ತರು ಷರತ್ತುಗಳನ್ನು ಗಾಳಿಗೆ ತೂರಿ ಪೆಂಡಾಲ್‌ನಲ್ಲಿ ಬ್ಯಾನರ್ ಅಳವಡಿಸಿದ್ದಾರೆ.

ಪೊಲೀಸರ ವಿರೋಧದ ನಡುವೆಯೂ ಬ್ಯಾನರ್ ಅಳವಡಿಸಿದ ಹಿಂದೂ ಕಾರ್ಯಕರ್ತರು, ಗಣೇಶ ಪ್ರತಿಷ್ಟಾಪನೆ ಮಾಡಿದ ಪೆಂಡಾಲ್‌ನಲ್ಲಿ ವೀರ ಸಾವರ್ಕರ್ ಹಾಗೂ ಬಾಲ ಗಂಗಾಧರ್ ತಿಲಕ್ ಇರುವ ಬ್ಯಾನರ್ ಅಳವಡಿಸಿದ್ದಾರೆ. ಪಾಲಿಕೆ ಷರತ್ತು ವಿಧಿಸಿದ್ದರೂ ಕೂಡ ಹಿಂದೂ ಕಾರ್ಯಕರ್ತರು ಬ್ಯಾನರ್ ಅಳವಡಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

31/08/2022 08:07 pm

Cinque Terre

36.27 K

Cinque Terre

9

ಸಂಬಂಧಿತ ಸುದ್ದಿ