ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಸಾವರಕರ ಭಾವಚಿತ್ರ ಸುಟ್ಟಿದ್ದನ್ನು ಖಂಡಿಸಿ ಬೆಳಗಾವಿ ರಸ್ತೆ ಬಂದ್ ಮಾಡಿದ ಹಿಂದೂ ಕಾರ್ಯಕರ್ತರು

ಧಾರವಾಡ: ಪ್ರತಿಭಟನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರಕರ ಅವರ ಭಾವಚಿತ್ರ ಸುಟ್ಟಿದ್ದನ್ನು ಖಂಡಿಸಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಧಾರವಾಡ ಉಪನಗರ ಪೊಲೀಸ್ ಠಾಣೆ ಎದುರಿಗಿನ ಬೆಳಗಾವಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ರಾತ್ರಿ 8.30 ರ ಸುಮಾರಿಗೆ ಠಾಣೆಗೆ ಬಂದ ಹಿಂದೂಪರ ಸಂಘಟನೆ ಕಾರ್ಯಕರ್ತರು ಸಾವರಕರ ಭಾವಚಿತ್ರ ಸುಟ್ಟ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸುವಂತೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Edited By : Shivu K
Kshetra Samachara

Kshetra Samachara

19/08/2022 10:40 pm

Cinque Terre

47.17 K

Cinque Terre

13

ಸಂಬಂಧಿತ ಸುದ್ದಿ