ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶೆಟ್ಟರಗೆ ಖಾದಿ ರಾಷ್ಟ್ರೀಯ ಧ್ವಜದ ಕೊಡುಗೆ:ನಿರ್ಧಾರ ಕೈಬಿಟ್ಟು ರಾಷ್ಟ್ರೀಯತೆಗೆ ಒತ್ತು ಕೊಡಿ.!

ಹುಬ್ಬಳ್ಳಿ:ಅದು ದೇಶಕ್ಕೆ ದೇಶವೇ ಹೆಮ್ಮೆಪಡುವ ಸಂದೇಶ. ಈ ಮಹತ್ವದ ಸಂದೇಶಕ್ಕೆ ಕೈ ನಾಯಕರು ದಿನನಿತ್ಯವೂ ಹೋರಾಟ ನಡೆಸುತ್ತಿದ್ದಾರೆ. ಆದರೆ ಆಡಳಿತಾರೂಢ ಸರ್ಕಾರಕ್ಕೆ ಮಾತ್ರ ಮಹತ್ವ ಅರಿಯದೇ ತಿಳಿದಂತೆ ವರ್ತನೆ ಮಾಡುತ್ತಿದೆ. ಆದರೆ ಕೈ ನಾಯಕರು ಈಗ ಮಹತ್ವದ ಸಂದೇಶದ ಮನವರಿಕೆ ಮಾಡಲು ಮುಂದಾಗಿದ್ದಾರೆ. ಅಷ್ಟಕ್ಕೂ ಏನಿದು ಹೋರಾಟ ಅಂತೀರಾ ಈ ಸ್ಟೋರಿ ನೋಡಿ.

ಕೇಂದ್ರ ಸರ್ಕಾರ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆ ಮನೆ ಮನೆಗೂ ರಾಷ್ಟ್ರೀಯ ಧ್ವಜ ಹಾರಿಸುವ ನಿರ್ಧಾರ ಕೈಗೊಂಡಿದೆ. ಆದರೆ ನಮ್ಮ ದೇಶದ ಖಾದಿಗೆ ಕಂಟಕವನ್ನು ತಂದಿಟ್ಟು ರಾಷ್ಟ್ರೀಯತೆಯನ್ನು ಸಾರಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಆಡಳಿತಾರೂಢ ಬಿಜೆಪಿ ಸರ್ಕಾರದ ನಾಯಕರ ಗಮನ ಸೆಳೆಯುವ ಮೂಲಕ ದೇಶದ ಖಾದಿ ರಾಷ್ಟ್ರಧ್ವಜದ ಬಗ್ಗೆ ದೇಶಪ್ರೇಮ ಮೂಡಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ರಾಷ್ಟ್ರಧ್ವಜ ರಕ್ಷಣಾ ಅಭಿಯಾನದ ಮೂಲಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಸ್ವಗೃಹಕ್ಕೆ ಭೇಟಿ ನೀಡಿ, ಖಾದಿ ಉಳಿಸುವ ಮೂಲಕ ಖಾದಿ ರಾಷ್ಟ್ರೀಯ ಧ್ವಜದ ಸಂರಕ್ಷಣಾ ಅಭಿಯಾನಕ್ಕೆ ಮುನ್ನುಡಿ ಬರೆದಿದ್ದಾರೆ.

ಇನ್ನೂ ಬಿಜೆಪಿ ನಾಯಕರು ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರಿಗೆ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಖಾದಿ ರಾಷ್ಟ್ರಧ್ವಜ ಕಾಣಿಕೆ ನೀಡಿದ್ದು, ಖಾದಿಯಿಂದ ತಯಾರಿಸಿದ ಧ್ವಜವನ್ನೇ ಮನೆಯ ಮೇಲೆ ಹಾರಿಸುವಂತೆ ಮನವಿ ಮಾಡಿದ್ದಾರೆ. ಈಗಾಗಲೇ ಚೀನಾ ಪಾಲಿಸ್ಟರ್ ಧ್ವಜಕ್ಕೆ ಅನುಮತಿ ನೀಡಿರುವ ಕೇಂದ್ರ ಸರ್ಕಾರ ಇಂತಹ ನಿರ್ಧಾರದ ಮೂಲಕ ದೇಶಿಯತೆಗೆ ಹೊಡೆತ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನೀತಿಯನ್ನು ಕೈಬಿಟ್ಟು ಖಾದಿ ಉಳಿವಿಗಾಗಿ ಕೈ ಜೋಡಿಸುವಂತೆ ಖಾದಿ ದಿನವೇ ಮಾಜಿ ಸಿಎಂ ಶೆಟ್ಟರ್ ಅವರಿಗೆ ಉಳ್ಳಾಗಡ್ಡಿಮಠ ಖಾದಿ ರಾಷ್ಟ್ರೀಯ ಧ್ವಜ ಕಾಣಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಹೊಸ ತಿದ್ದುಪಡಿಯಲ್ಲಿ ಪಾಲಿಸ್ಟರ್ ಬಟ್ಟೆಯ ಧ್ವಜಗಳಿಗೆ ಅವಕಾಶ ನೀಡಿರುವ ಕೇಂದ್ರ ಸರ್ಕಾರ, ಯಂತ್ರದಿಂದ ತಯಾರಿಸಿದ ರಾಷ್ಟ್ರಧ್ವಜಗಳಿಗೂ ಅವಕಾಶ ನೀಡಿದೆ. ಈ ಎಲ್ಲ ನಿರ್ಧಾರವನ್ನು ಕೈಬಿಟ್ಟು ರಾಷ್ಟ್ರೀಯ ಖಾದಿ ಧ್ವಜಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಇನ್ನೂ ಕೂಡ ಸಾಕಷ್ಟು ಸಮಯಾವಕಾಶ ಇದ್ದು, ಕೂಡಲೇ ಹೊಸ ತಿದ್ದುಪಡಿ ಕೈಬಿಟ್ಟು ದೇಶಿಯತೆಯನ್ನು ಕಾಪಾಡಬೇಕಿದೆ.

Edited By : Nagesh Gaonkar
Kshetra Samachara

Kshetra Samachara

07/08/2022 06:32 pm

Cinque Terre

18.94 K

Cinque Terre

0

ಸಂಬಂಧಿತ ಸುದ್ದಿ