ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಸಚಿವರಿಗೆ ರೈತರ ಅವಶ್ಯಕತೆ ಇಲ್ಲಾ; ಕೋನರಡ್ಡಿ

ನವಲಗುಂದ: ಪಟ್ಟಣದಲ್ಲಿ ಸರತಿ ಉಪವಾಸಕ್ಕೆ ಕುಳಿತ ರೈತರನ್ನು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭೇಟಿ ಆಗದೆ ಸಮಸ್ಯೆಯನ್ನು ಆಲಿಸದೇ ಹೋದ ವಿಷಯದ ಬಗ್ಗೆ ಮಾಜಿ ಶಾಸಕ ಎನ್ ಹೆಚ್ ಕೋನರಡ್ಡಿ ಪ್ರತಿಕ್ರಿಯೆ ನೀಡಿ, ಸಚಿವರಿಗೆ ರೈತರ ಅವಶ್ಯಕತೆ ಇಲ್ಲಾ ಎಂದರು.

ಕಾಂಗ್ರೆಸ್ ಪ್ರತಿಭಟನೆ ವೇಳೆ ಪಬ್ಲಿಕ್ ನೆಕ್ಸ್ಟ್ ನೊಂದಿಗೆ ಮಾತನಾಡಿದ ಅವರು, ಯಾವ ರೈತರು ಪ್ರತಿಭಟನೆ ಮಾಡಿದರೂ ನಾನು ಶಾಸಕನಿದ್ದ ಸಂದರ್ಭದಲ್ಲಿ ಖುದ್ದಾಗಿ ಹೋಗಿ ಭೇಟಿಯಾಗಿ ಸಮಸ್ಯೆ ಬಗ್ಗೆ ಕೇಳ್ತಿದ್ದೆ. ಇವರು ಭೇಟಿ ಆಗಿಲ್ಲಾ ಅಂತಾ ಅಂದ್ರೆ ಅವರಿಗೆ ಅವರ ಅವಶ್ಯಕತೆ ಇಲ್ಲಾ ಅಂತಾ ಅರ್ಥ. ಯಾರೇ ಪ್ರತಿಭಟನೆ ಮಾಡಿದರೂ ಹೋಗಿ ಅವರ ಅವಹಾಲುಗಳನ್ನು ಸ್ವೀಕರಿಸುವಂತಹ ಕೆಲಸ ಮಾಡಬೇಕಿತ್ತು. ಯಾರೇ ಪ್ರತಿಭಟನೆಗೆ ಕುಳಿತರು ಅವರ ಅವಹಾಲುಗಳನ್ನು ಸ್ವೀಕರಿಸುವುದು ಜನಪ್ರತಿನಿದಿನಗಳ ಕರ್ತವ್ಯ ಎಂದರು.

Edited By : Nagesh Gaonkar
Kshetra Samachara

Kshetra Samachara

26/07/2022 09:28 am

Cinque Terre

68.67 K

Cinque Terre

1

ಸಂಬಂಧಿತ ಸುದ್ದಿ