ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಕೋನರಡ್ಡಿಯಿಂದ ರೈತರ ಮಹದಾಯಿ ಹೋರಾಟ ಒಡೆಯುವ ಸಂಚು

ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

ನವಲಗುಂದ: ರೈತರ ಹೋರಾಟಗಳನ್ನು ಹೈಜಾಕ್ ಮಾಡುವುದು, ರೈತರನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುವುದರಲ್ಲಿ ಕಾಂಗ್ರೆಸ್ ಎತ್ತಿದ ಕೈ. ಅನೇಕ ವರ್ಷಗಳಿಂದ ಪಕ್ಷಾತೀತವಾಗಿ ನಡೆಸಿಕೊಂಡು ಬಂದ ಮಹದಾಯಿ ಹೋರಾಟವನ್ನು ತನ್ನ ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.

ಈಗಾಗಲೇ ನವಲಗುಂದದಲ್ಲಿ ಮಲಪ್ರಭಾ ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟ, ಪಕ್ಷಾತೀತ ಹೋರಾಟ ಸಮಿತಿ ಹಾಗೂ ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟ ಎಂಬ ಸಮಿತಿಗಳಿವೆ. ಅಷ್ಟೇ ಅಲ್ಲದೆ ಎಲ್ಲಾ ಸಮಿತಿಗಳನ್ನು ಸೇರಿಸಿ, ಮಹದಾಯಿ ಮಹಾ ವೇದಿಕೆ ಎಂಬ ಘೋಷಣೆ ವಾಕ್ಯದೊಂದಿಗೆ ಸಂಘಟಿಸುವ ಪ್ರಯತ್ನ ನಡೆದಿದೆ.

ಹೀಗಿರುವಾಗ ಮಾಜಿ ಶಾಸ ಎನ್.ಹೆಚ್ ಕೋನರಡ್ಡಿ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿ ರಚಿಸುವ ಅಗತ್ಯವೇನಿತ್ತು ಎಂದು ರೈತರು ಕೇಳುವಂತಾಗಿದೆ. ಇದು ರೈತಪರ ಹೋರಾಟ ಸಮಿತಿಯನ್ನು ಸಂಘಟಿಸುವ ಪ್ರಯತ್ನಕ್ಕೆ ಕಾಂಗ್ರೆಸ್ಸಿನ ಕೋನರಡ್ಡಿ ಕಲ್ಲು ಹಾಕುತ್ತಿದ್ದಾರೆ ಎಂದು ಹೇಳಬಹುದು.

ಪಕ್ಷಾತೀತವಾಗಿ ರೈತ ಸಂಘಟನೆಗಳಿಗೆ ಬೆಂಬಲ ನೀಡಬೇಕಿದ್ದ ಕೋನರಡ್ಡಿ ತಮ್ಮ ಸ್ವಂತ ಕಚೇರಿಯಲ್ಲೇ ಮತ್ತೊಂದು ಸಮಿತಿ ಉದ್ಘಾಟಸಿರುವುದು ಇವರ ಒಡೆದಾಳುವ ನೀತಿಗೆ ಸಾಕ್ಷಿಯಾಗಿದೆ. ಕಳಸಾ-ಬಂಡೂರಿ ಯೋಜನೆಗಾಗಿ ನಡೆದ ಹೋರಾಟ ರಾಷ್ಟ ಮಟ್ಟಕ್ಕೆ ತಲುಪಿತ್ತು. ಹೋರಾಟದ ತೀವ್ರತೆಗೆ ಇಡೀ ರಾಜ್ಯವೇ ಬೆಚ್ಚಿ ಬಿದ್ದಿತ್ತು. ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಸಿದ್ದತೆಗಳು ನಡೆದಿದೆ. ಇದೇ ಸಂದರ್ಭದಲ್ಲಿ 1980ರ ಹೋರಾಟದಲ್ಲಿ ಹುತಾತ್ಮರಾದ ರೈತರಿಗಾಗಿ ಜುಲೈ 21ರಂದು ಹುತಾತ್ಮ ದಿನಾಚರಣೆಯನ್ನು ಸಹ ಹಮ್ಮಿಕೊಳ್ಳಲಾಗುತ್ತಿದೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

20/07/2022 07:36 pm

Cinque Terre

72.33 K

Cinque Terre

4

ಸಂಬಂಧಿತ ಸುದ್ದಿ