ಕಲಘಟಗಿ: ತಾಲೂಕಿನಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ತಾಲೂಕ ಆಡಳಿತ ಮಾಜಿ ಸಚಿವ ಸಂತೋಷ ಲಾಡ್ ರವರ ಬ್ಯಾನರ್ ತೆಗೆದು ಹಾಕಿದ್ದಕ್ಕೆ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವು ಯುವಕರು ಸಂತೋಷ್ ಲಾಡ್ ಅವರ ಮೇಲಿನ ಅಭಿಮಾನದಿಂದ ಕ್ರಿಕೆಟ್ ಟೂರ್ನಾಮೆಂಟ್ ಆಯೋಜನೆಗೆ ಸಂಬಂಧ ಬ್ಯಾನರ್ ಹಾಕಿದ್ದರು. ಅದನ್ನ ತಾಲೂಕಾ ಆಡಳಿತದವರು ತೆರವುಗೊಳಿಸಿದ್ದರು. ಆದರೆ ತಾಲೂಕಿನ ತುಂಬಾ ಬಿಜೆಪಿಯ ಬ್ಯಾನರ್ ತೆರವು ಮಾಡದೆ ಕೇವಲ ಸಂತೋಷ ಲಾಡ್ ರವರ ಬ್ಯಾನರ್ ತೆಗೆದು ಹಾಕಿದ್ದರಿಂದ ಬಿಜೆಪಿ ಬ್ಯಾನರ್ ಗಳನ್ನು ತೆಗೆದು ಹಾಕುವಂತೆ ಇಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
Kshetra Samachara
10/06/2022 05:51 pm