ಕಲಘಟಗಿ: ಪಟ್ಟಣದ ಶಾಸಕರ ನಿವಾಸದಲ್ಲಿ ಶ್ರೀ ಸಿ.ಎಂ. ನಿಂಬಣ್ಣವರ, ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷರಾದ ಶ್ರೀ ಬಸವರಾಜ ಕುಂದಗೋಳಮಠ, ಮಂಡಲ ಅಧ್ಯಕ್ಷರಾದ ಶ್ರೀ ಬಸವರಾಜ ಶೆರೆವಾಡ ಇವರ ನೇತೃತ್ವದಲ್ಲಿ ಮುಕ್ಕಲ ಗ್ರಾಮ ಪಂಚಾಯತಿ 8 ಜನ ಸದಸ್ಯರುಗಳು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಶ್ರೀ ಸಹದೇವ ಹೋರಕೇರಿ, ಶ್ರೀ ನಿಂಗಪ್ಪ ಕಲಕಟ್ಟಿ, ಶ್ರೀ ಶ್ರೀಕಾಂತಗೌಡ ಶೇಖಪ್ಪ ಪಾಟೀಲ, ಶ್ರೀ ಶ್ರೀಕಾಂತಗೌಡ ಸೋ. ಪಾಟೀಲ, ಶ್ರೀಮತಿ ಸರೋಜಾ ಬಡಿಗೇರ, ಶ್ರೀಮತಿ ರತ್ನವ್ವ ಕ. ಗಾಡಗೋಳಿ, ಶ್ರೀಮತಿ ಯಲ್ಲವ್ವ ಸಂ. ಓಲೇಕಾರ, ಶ್ರೀಮತಿ ಮಂಜುಳಾ ಮ. ಹರಿಜನ ಬಿಜೆಪಿಗೆ ಸೇರ್ಪಡೆಯಾದವರು.
ಈ ಸಂದರ್ಭದಲ್ಲಿ ಧಾ.ಗ್ರಾ. ಜಿಲ್ಲಾ ಪ್ರ.ಕಾರ್ಯದರ್ಶಿ ಶ್ರೀ ಸದಾನಂದ ಚಿಂತಾಮಣಿ, ಉಪಾಧ್ಯಕ್ಷರಾದ ಶ್ರೀ ನಿಂಗಪ್ಪ ಸುತಗಟ್ಟಿ, ಮುಕ್ಕಲ ಗ್ರಾಮದ ಪ್ರಮುಖರಾದ ಶ್ರೀ ನೀಲಕಂಠಗೌಡ ಪಾಟೀಲ, ಪರಶುರಾಮ ದುಂಡಿ, ಬಸವರಾಜ ಮಾದರ, ಪರಶುರಾಮ ಹುಲಿಹೊಂಡ, ಶ್ರೀಧರ ದ್ಯಾವಪ್ಪನವರ, ಹನಮಂತ ಮುಗಳಿ, ಸ್ಥಳೀಯ ಪಕ್ಷದ ಕಾರ್ಯಕರ್ತರು ಹಾಗೂ ಮುಕ್ಕಲ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.
-ಉದಯ ಗೌಡರ, ಪಬ್ಲಿಕ್ ನೆಕ್ಸ್ಟ್, ಕಲಘಟಗಿ
Kshetra Samachara
04/06/2022 04:51 pm