ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನರ ಕುತೂಹಲಕ್ಕೆ ಕಾರಣವಾಗಿರುವ ಬಹುನೀರಿಕ್ಷಿತ ಮೇಯರ್-ಉಪಮೇಯರ್ ಆಯ್ಕೆಗೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ಹು-ಧಾ ಮಹಾನಗರ ಪಾಲಿಕೆಯಿಂದ ಎಲ್ಲ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆದು ಒಂಬತ್ತು ತಿಂಗಳ ಬಳಿಕ ಮೇಯರ್, ಉಪಮೇಯರ್ ಆಯ್ಕೆಗೆ ಕಾಲ ಕೂಡಿ ಬಂದಿದ್ದು, ಇಂದು ಅಧಿಕಾರ ಯಾರ ಕೈ ಸೇರಲಿದೆ ಎಂಬುವುದು ತೀರ್ಮಾನವಾಗಲಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಈಗಾಗಲೇ ಪಾಲಿಕೆ ಮೇಲ್ಮಹಡಿಯಲ್ಲಿರುವ ಸಭಾಂಗಣವನ್ನು ಸಿದ್ಧ ಪಡಿಸಲಾಗಿದೆ.
ವಾರ್ಡ್ ಮರು ವಿಂಗಡಣೆ ಬಳಿಕ ಪಾಲಿಕೆಗೆ 82 ಜನ ಚುನಾಯಿತ ಪ್ರತಿನಿಧಿಗಳು ಆಗಮಿಸುತ್ತಿದ್ದು, ಸುಮಾರು ವರ್ಷಗಳ ನಂತರ ಬಹು ನೀರಿಕ್ಷಿತ ಮೇಯರ್ ಉಪಮೇಯರ್ ಆಯ್ಕೆ ನಡೆಯುತ್ತಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಪಾಳೆಯದಲ್ಲಿ ಈಗಾಗಲೇ ಸಾಕಷ್ಟು ಸರ್ಕಸ್ ನಡೆಯುತ್ತಿದೆ.
Kshetra Samachara
28/05/2022 08:11 am