ಹುಬ್ಬಳ್ಳಿ: ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲಿಕೆ ಮಾಡಬೇಡಿ. ಮೋದಿ ಮೋದಿಯೇ ನೆಹರು ನೆಹರುನೇ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವೈಚಾರಿಕತೆ ಇರುವ ನಾಯಕ. ಸಾಕಷ್ಟು ಬಜೆಟ್ ಮಂಡಿಸಿದವರು. ಅವರ ವೈಚಾರಿಕತೆ ಅವರಿಗರಲಿ. ಈ ದೇಶದಲ್ಲಿ ಹೆಡ್ಗೆವಾರ್ ಆರ್‌ಎಸ್‌ಎಸ್ ಸ್ಥಾಪಿಸಿದ್ದು, ಅವರೊಬ್ಬ ದೇಶದ ಅಪ್ರತಿಮ ನಾಯಕ ಮುಸ್ಲಿಂ ತುಷ್ಟೀಕರಣಕ್ಕಾಗಿ ಬಾಯಿಗೆ ಬಂದ ಹಾಗೆ ಸಿದ್ದರಾಮಯ್ಯ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರು ಕೆ. ಬಿ. ಹೆಡ್ಗೆವಾರ್ ಯಾರು ಏನು ಮಾಡಿದ್ರು ತಿಳಿದುಕೊಳ್ಳಲಿ. ಎಲ್ಲ ತಿಳಿದುಕೊಂಡು ಮಾತನಾಡಿದರೆ ಅದು ತಪ್ಪು, ಅವರು ಸೇವಾದಳದಲ್ಲಿದ್ದರು ಎನ್ನೋದು ಗೊತ್ತಿಲ್ವಾ? ಅವರೊಬ್ಬರು ಜನ್ಮಜಾತ ದೇಶಭಕ್ತರು. ಸಿದ್ದುಗೆ ಆರ್‌ಎಸ್‌ಎಸ್ ಬಗ್ಗೆ ಗೊತ್ತಿಲ್ಲ ಅಂದ್ರೆ ಅವರ ಮೇಲೆ ಅನುಕಂಪವಿದೆ. ಗೊತ್ತಿದ್ರು ನಾಟಕ ಮಾಡ್ತಿದ್ದಾರೆ ಎಂದು ಲೇವಡಿ ಮಾಡಿದರು.
ಈ ಹಿಂದೆ ಕಾಂಗ್ರೆಸ್ ನವರು ಪಠ್ಯಪುಸ್ತಕದಲ್ಲಿ ಕಮ್ಯುನಿಷ್ಠರ ವಿಚಾರಧಾರೆ ಹಾಕಿದ್ದರು. ಸಿದ್ದರಾಮಯ್ಯ ತಾವೊಬ್ಬರೇ ತಜ್ಞರು ಅಂದುಕೊಂಡಿದ್ದಾರೆ. ಅದನ್ನ ಬಿಟ್ಟು ಹೊರಗಡೆ ಬರಬೇಕು. ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನ ಕೂಡ ಬಾಯಿಗೆ ಬಂದಂತೆ ಬೈದಿದ್ದರು. ಕೆಲ ಗದ್ಯವನ್ನು ಇವರೇ ತೆಗೆದು, ಇವರೇ ಡ್ರಾಮ ಮಾಡ್ತಿದ್ದಾರೆ. ಸಿದ್ದರಾಮಯ್ಯನವರೇ ಜನ ನಿಮ್ಮನ್ನ ತಿರಸ್ಕರಿಸಿದ್ದಾರೆ. ಯುಪಿನಲ್ಲಿ 388 ಕ್ಷೇತ್ರದ ನಿಮ್ಮ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಜನ ನಿಮ್ಮನ್ನ ಮೂಲೆಯಲ್ಲಿ ತಳ್ಳಿದ್ದಾರೆ. ನೀವು ಯಾಕೆ ಕ್ಷುಲ್ಲಕ್ಕೆ ಮಾತನಾಡಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/05/2022 04:16 pm