ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬೊಮ್ಮಯಿಯವರು ಕಾಮನ್ ಮ್ಯಾನ್ ಸಿಎಂ: ಪ್ರಹ್ಲಾದ ಜೋಶಿ

ಧಾರವಾಡ: ಈ ಹಿಂದೆಲ್ಲಾ ಮುಖ್ಯಮಂತ್ರಿಗಳು ಬಂದರೆ ಪೊಲೀಸ್ ಬಿಗಿ ಬಂದೋಬಸ್ತ್ ಇರುತ್ತಿತ್ತು. ಆದರೆ ಬಸವರಾಜ ಬೊಮ್ಮಯಿ ಅವರು ಸಿಎಂ ಸ್ಥಾನಕ್ಕೆ ಬಂದ ಮೇಲೆ ಬಂದೋಬಸ್ತ್ ಕ್ಯಾನ್ಸಲ್ ಮಾಡಿ, ಕಾಮನ್ ಮ್ಯಾನ್ ಸಿಎಂ ಆಗಿ ಹೊರಹೊಮ್ಮುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೊಗಳಿದ್ದಾರೆ.

ಧಾರವಾಡದಲ್ಲಿ ಚನ್ನಬಸವೇಶ್ವರ ಕಂಚಿನ ಪುತ್ಥಳಿ ಅನಾವರಣ ವೇದಿಕೆ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೊಮ್ಮಾಯಿಯವರು ಬಂದ ಮೇಲೆ ಸರಳ ಸಿಎಂ ಆಗಿದ್ದಾರೆ. ಹಿಂದಿನವರಿಗಿಂತ ಇವರು ಕಾಮನ್ ಮ್ಯಾನ್ ಸಿಎಂ ಹೊರಹೊಮ್ಮಿದ್ದಾರೆ ಎಂದರು.

ಧಾರವಾಡಕ್ಕೆ ಬರೋವಾಗ ದಾರಿ ಮಧ್ಯೆ ಓರ್ವ ನಿಲ್ಲಿಸಿ ಕೈ ಕುಲುಕಿ ಹೋದ, ಇದೆಲ್ಲ ಮೊದಲೆಲ್ಲ ಸಾಧ್ಯ ಆಗುತ್ತಿರಲಿಲ್ಲ. ಎಸ್.ಆರ್. ಬೊಮ್ಮಾಯಿ ಸುಪುತ್ರ ಆಗಿ ಇದ್ದವರೂ ಅವರು ಸ್ನೇಹ ಬಳಗ ದೊಡ್ಡದಿದೆ. ಎಲ್ಲಿಯೂ ಸಿಎಂ ತರಹದ ವರ್ತನೆ ತೋರಿಲ್ಲ, ಆ ರೀತಿಯ ಕಾಮನ್ ಮ್ಯಾನ್ ಸಿಎಂ ಬೊಮ್ಮಯಿವರು ಅವರಾಗುತ್ತಿದ್ದಾರೆ ಎಂದು ಜೋಶಿ ಹೇಳಿದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/05/2022 05:43 pm

Cinque Terre

108.03 K

Cinque Terre

5

ಸಂಬಂಧಿತ ಸುದ್ದಿ