ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಬ್ಯಾರೇಜ್ ಕಾಮಗಾರಿಗೆ ಚಾಲನೆ

ಅಳ್ನಾವರ: ಕಳೆದ ಪ್ರವಾಹದ ಸಂದರ್ಭದಲ್ಲಿ ಹಿಂದೆಂದೂ ಕಾಣದಂತಹ ಮಳೆ ಕಂಡಿದ್ದು ಅಳ್ನಾವರ ತಾಲೂಕು.ಹುಲಿಕೇರಿ ಇಂದಿರಮ್ಮನ ಕೆರೆ ಕಟ್ಟೆ ಒಡೆದ ಪರಿಣಾಮ ಅಳ್ನಾವರದ ಡೌಗಿ ನಾಲಾ ಬ್ಯಾರೇಜ್ ಸಂಪೂರ್ಣ ಜಲಾವೃತವಾಗಿ ನಾಶವಾಗಿತ್ತು.

ಇದರ ನಿಮಿತ್ತವಾಗಿ ಸಣ್ಣ ನೀರಾವರಿ ಇಲಾಖೆ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದಿಂದ ಸುಮಾರು ಮೂರು ಕೋಟಿ ರೂ ಅನುದಾನದಲ್ಲಿ ಡೌಗಿ ನಾಲಾದ ಬ್ಯಾರೇಜಿಗೆ ನೀರು ಸಂರಕ್ಷಣಾ ಕಾಮಗಾರಿಗೆ ಶಾಸಕರಾದ ಸಿ,ಎಂ,ನಿಂಬಣ್ಣವರ ಗುದ್ಲಿ ಪೂಜೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಲಿಂಗರಾಜ ಮೂಲಿಮಣಿ,ಶಿವಾಜಿ ಡೊಳ್ಳಿನ,ಪ್ರವೀಣ ಪವಾರ,ನಾರಾಯಣ ಮೊರೆ ಹಾಗೂ ಪ.ಪಂ ಅಧ್ಯಕ್ಷರು,ಉಪಾಧ್ಯಕ್ಷರ ಸರ್ವ ಸದಸ್ಯರು ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

03/05/2022 09:19 am

Cinque Terre

9.23 K

Cinque Terre

0

ಸಂಬಂಧಿತ ಸುದ್ದಿ