ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಭದ್ರಾಪುರ ಗ್ರಾಮಕ್ಕೆ ಆಗಮಿಸಿದ ಜನತಾ ಜಲಧಾರೆ

ಅಣ್ಣಿಗೇರಿ: ರಾಜ್ಯಾದ್ಯಂತ ಆರಂಭವಾದ ಜೆಡಿಎಸ್ ಪಕ್ಷದ ಜನತಾ ಜಲಧಾರೆ ಯಾತ್ರೆ ಇಂದು ಕುಂದಗೋಳ ತಾಲೂಕಿನಿಂದ ನವಲಗುಂದ ವಿಧಾನಸಭಾ ಕ್ಷೇತ್ರದ ಅಣ್ಣಿಗೇರಿ ತಾಲೂಕಿನ ಭದ್ರಾಪುರ ಗ್ರಾಮಕ್ಕೆ ಆಗಮಿಸಿದೆ.

ಧಾರವಾಡ ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಅಂಗಡಿ ನೇತೃತ್ವದಲ್ಲಿ ಆರಂಭವಾದ ಯಾತ್ರೆ ಅತ್ಯಂತ ವಿಜ್ರಂಭಣೆಯಿಂದ ಆರಂಭವಾಗಿದೆ.

ಇನ್ನು ಯಾತ್ರೆಗೆ ಡೊಳ್ಳು ಮೇಳ,ಕುಂಭ ಹೊತ್ತ ಮಹಿಳೆಯರು ಮೆರುಗು ತಂದರು. ಬಳಿಕ ಭದ್ರಾಪುರ ಗ್ರಾಮ ಮುಗಿಸಿಕೊಂಡು ಅಣ್ಣಿಗೇರಿ ಪಟ್ಟಣದತ್ತ ಜಲ ಯಾತ್ರೆ ಪ್ರಯಾಣ ಬೆಳೆಸಿದೆ.

ಯಾತ್ರೆಯಲ್ಲಿ ಗ್ರಾಮದ ಜನ ಸೇರಿದಂತೆ ಜಿಡಿಎಸ್ ಕಾರ್ಯಕರ್ತರು ಭಾಗವಹಿಸಿ ಯಾತ್ರೆಗೆ ಮೆರಗು ತಂದರು.

ಜಲಧಾರೆ ಯಾತ್ರೆ ಯುದ್ದಕ್ಕೂ ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ್ ಹುಣಸಿಮರದ ಸೇರಿದಂತೆ ಅನೇಕ ಪದಾಧಿಕಾರಿಗಳು ಕಾರ್ಯಕರ್ತರು ಭಾಗಿಯಾದರು.

Edited By : Nagesh Gaonkar
Kshetra Samachara

Kshetra Samachara

02/05/2022 05:59 pm

Cinque Terre

21.02 K

Cinque Terre

1

ಸಂಬಂಧಿತ ಸುದ್ದಿ