ಹುಬ್ಬಳ್ಳಿ: ಕೆ.ಎಸ್.ಈಶ್ವರಪ್ಪ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಹಿನ್ನೆಲೆಯಲ್ಲಿ, ಇಡೀ ರಾಜ್ಯವೇ ಅವರ ರಾಜೀನಾಮೆಗೆ ಒತ್ತಾಯಿಸಿದೆ. ಆದರೆ ಈಶ್ವರಪ್ಪ ಅವರು ಮಾತ್ರ ನಾನು ರಾಜೀನಾಮೆ ಕೊಡುವುದಿಲ್ಲ ಎಂದು ಬಂಡತನ ಪ್ರದರ್ಶನ ಮಾಡುತ್ತಿದ್ದಾರೆ. ಇದನ್ನು ನಾಡಿನ ಜನರು ಸೂಕ್ಷ್ಮವಾಗಿ ಗಮನಿಸಬೇಕಿದೆ ಎಂದು ಶಾಸಕ ಪ್ರಸದಾ ಅಬ್ಬಯ್ಯ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದಾ ಅವರು, ಇನ್ನೂ ಕೆ.ಎಸ್.ಈಶ್ವರಪ್ಪ ರಾಜೀನಾಮೆ ಕುರಿತು ಕೇಂದ್ರ ಸಚಿವರು ಪ್ರತಿಕ್ರಿಯೆ ನೀಡದ ವಿಚಾರವಾಗಿ ಮಾತನಾಡಿದ ಅವರು, ಕೇಂದ್ರ ಸಚಿವರು ಹಾಗೂ ಬಿಜೆಪಿಯವರದ್ದು ಒಂದೇ ಅಜೆಂಡಾ. ಅವರ ಬಂಡವಾಳವೇ ಜಾತಿ-ಧರ್ಮವೇ ಅವರಿಗೆ ಆಧಾರ. ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ. ಯಾವ ಬಾಬಾಸಾಹೇಬರ ಕನಸು ನೆನಸು ಮಾಡಬೇಕೆಂದು ಇಲ್ಲ. ಆದರೆ ನಮ್ಮ ವಿಚಾರ ಬುದ್ದ ಭಾರತ ಆಗಬೇಕು, ಬಸವಣ್ಣನ ಭಾರತ ಆಗಬೇಕು. ಅಂಬೇಡ್ಕರ್ ಭಾರತ ಆಗಬೇಕು ಎಂಬ ಕನಸಿವೆ ಎಂದರು.
ರಾಜ್ಯದಲ್ಲಿ ನಡೆಯುತ್ತಿರುವ ಧರ್ಮದ ದಂಗಲ್ ಗೆ ಯಾರು ಕಾರಣ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರನ್ನು ಬಿಟ್ಟು ಯಾರು ಇಲ್ಲ. ಆರ್.ಎಸ್.ಎಸ್, ಬಜರಂಗದಳ ಬಿಜೆಪಿಯ ಅಂಗಗಳು. ಅವರ ಮೂಲಕ ರಾಜ್ಯ, ದೇಶದಲ್ಲಿ ಅಶಾಂತಿ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ದಕ್ಷ ಪೊಲೀಸ್ ಅಧಿಕಾರಿ ಗಣಪತಿ ಆತ್ಮಹತ್ಯೆ ಆದ ಸಂದರ್ಭದಲ್ಲಿ ಅಂದಿನ ಗೃಹ ಸಚಿವರಾದ ಕೆ.ಜೆ.ಜಾರ್ಜ್ ಅವರು ಏಕಾಏಕಿ ರಾಜೀನಾಮೆ ಕೊಟ್ಟಿದ್ದರು. ತನಿಖೆ ನಂತರ ಮತ್ತೆ ಸಚಿವ ಸ್ಥಾನ ಪಡೆದುಕೊಂಡರು. ಆದರೆ ಆ ಧೈರ್ಯ ತೋರುಸುವ ತಾಕತ್ತು ಬಿಜೆಪಿಯವರಿಗಿಲ್ಲ.
ಬಿಜೆಪಿಯವರು ಮಾತಾಡೋದು ಒಂದು ಮಾಡೋದು ಒಂದಾಗಿದ್ದು, ಈಗ ಸಂಪೂರ್ಣ ವಿಫಲವಾಗಿದೆ. ಭ್ರಷ್ಟಾಚಾರ ಮೋದಿಯವರು ಯಾವುದೇ ಆಧಾರವಿಲ್ಲದೇ ಕರ್ನಾಟಕ ರಾಜ್ಯಕ್ಕೆ ಬಂದಾಗ ಕಾಂಗ್ರೆಸ್ ಸರ್ಕಾರ 10% ಸರ್ಕಾರ ಎಂದು ಹೇಳಿದರು. ಆದರೆ ಇವತ್ತು ರಾಜ್ಯದಲ್ಲಿ 40% ಸರ್ಕಾರ ಎಂದು ಗುತ್ತಿಗೆದಾರರೇ ಬಿರುದು ನೀಡಿದ್ದಾರೆ. ಹಾಗಾಗಿ ಬಿಜೆಪಿಗೆ ನಾಚಿಕೆ ಆಗಬೇಕು. ಅವರಿಗೆ ಮಾನ ಮರ್ಯಾದೆ ಇದ್ದರೆ, ರಾಜೀನಾಮೆ ಕೊಟ್ಟು ಜನರ ಎದುರಿಗೆ ಹೋಗಬೇಕು ಎಂದು ಹೇಳಿದರು.
ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಬದ್ದತೆ ಇಲ್ಲ. ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ ಅವರಿಗೆ ಅಧಿಕಾರದ ಆಸೆ ಮಾತ್ರ ಇದೆ. ಅಧಿಕಾರದಲ್ಲಿ ಕೂಡಬೇಕು. ಜನರನ್ನು ವಿಭಜನೆ ಮಾಡಬೇಕು. ಅವರು ರಾಜ್ಯ ದೇಶವನ್ನು ಆಳಬೇಕು. ಬಿಜೆಪಿ ಸಂವಿಧಾನ ಅಳುಗಾಡಿಸುವ ಕೆಲಸ ಮಾಡುತ್ತಿದ್ದೆ. ಬಿಜೆಪಿಯಿಂದ ಸಂವಿಧಾನಕ್ಕೆ ಕಂಟಕ ಇದೆ ಎಂದರು.
Kshetra Samachara
14/04/2022 03:07 pm