ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹೊರಟ್ಟಿ ಸಾಹೇಬರ ಎಲೆಕ್ಷನ್ ತಯಾರಿ?

ಧಾರವಾಡ: 1980 ರಿಂದಲೂ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗುತ್ತ ಬಂದು ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಹಾಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಈಗಿನಿಂದಲೇ ಮತ್ತೊಂದು ಬಾರಿ ಚುನಾವಣಾ ಅಖಾಡಕ್ಕಿಳಿಯಲು ಸಜ್ಜಾಗುತ್ತಿರುವಂತೆ ಕಾಣುತ್ತಿದೆ.

ಹೌದು! ಕಳೆದ ಆರು ವರ್ಷಗಳಿಂದ ಧಾರವಾಡ ಗ್ರಾಮಾಂತರ ಪ್ರದೇಶಕ್ಕೆ ಭೇಟಿ ನೀಡದ ಹೊರಟ್ಟಿ ಅವರು, ಇಂದು ಏಕಾಏಕಿ ಧಾರವಾಡ ಗ್ರಾಮೀಣ ಪ್ರದೇಶದ ಸುಮಾರು 10 ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿದ್ದಾರೆ.

ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಎಸ್‌ಜಿವಿ ಹೈಸ್ಕೂಲು, ಕಾಲೇಜು ಹಾಗೂ ಅಮ್ಮಿನಬಾವಿ, ಕರಡಿಗುಡ್ಡ, ಪುಡಕಲಕಟ್ಟಿ, ಲೋಕೂರು, ಯಾದವಾಡ, ಕುರುಬಗಟ್ಟಿ, ನರೇಂದ್ರ, ಮುಮ್ಮಿಗಟ್ಟಿ ಸೇರಿದಂತೆ ಇತರ ಊರುಗಳ ಶಾಲೆಗಳಿಗೆ ಸಭಾಪತಿ ಹೊರಟ್ಟಿ ಭೇಟಿ ನೀಡಿದರು.

ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಬಂದ ಹೊರಟ್ಟಿ ಅವರನ್ನು ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿದರು.

ನಂತರ ಮಾತನಾಡಿದ ಹೊರಟ್ಟಿ, ಕೆಲ ರಾಜಕೀಯ ವಿದ್ಯಮಾನಗಳಿಂದ ಶಾಲೆಗಳಿಗೆ ಭೇಟಿ ನೀಡಲು ಆಗಿರಲಿಲ್ಲ. ಶಿಕ್ಷಕರಿಗೆ ಏನೇ ಸಮಸ್ಯೆ ಬಂದರೂ ನಾನು ನೆರವಿಗೆ ಇದ್ದೇ ಇರುತ್ತೇನೆ. ಅನುದಾನಿತ ಶಾಲೆಗಳಿಗೂ ಸಹಾಯ, ಸಹಕಾರ ಬೇಕಾದರೆ ಶಿಕ್ಷಕರು ಕೇಳಬಹುದು ಎಂದರು.

ಉಪ್ಪಿನ ಬೆಟಗೇರಿಯ ವಿದ್ಯಾದಾನ ಸಮಿತಿ ಅಧ್ಯಕ್ಷ ವೀರಣ್ಣ ಪರಾಂಡೆ, ಕಾರ್ಯದರ್ಶಿ ಜಿ.ಆರ್.ಜವಳಗಿ, ಗ್ರಾಮೀಣ ಕ್ಷೇತ್ರದ ಬಿಇಓ ಬೊಮ್ಮಕ್ಕನವರ, ಚನ್ನಬಸಪ್ಪ ಮಸೂತಿ, ರಾಮಲಿಂಗಪ್ಪ ನವಲಗುಂದ, ಕಲ್ಲಪ್ಪ ಪುಡಕಲಕಟ್ಟಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿದ್ದರು.

Edited By : Shivu K
Kshetra Samachara

Kshetra Samachara

21/01/2022 07:01 pm

Cinque Terre

23.26 K

Cinque Terre

2

ಸಂಬಂಧಿತ ಸುದ್ದಿ