ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಎಪಿ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷರನ್ನಾಗಿ ವಿಕಾಸ ಸೊಪ್ಪಿನ ನೇಮಕ

ಹುಬ್ಬಳ್ಳಿ: ಆಮ್‌ ಆದ್ಮಿ ಪಕ್ಷದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ವಿಕಾಸ ಸೊಪ್ಪಿನ ಅವರನ್ನು ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ರಾಜಕೀಯ ಸಲಹೆಗಾರ ರೊಮಿ ಭಾಟಿ, ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ ಜೈನ್, ಜಿಲ್ಲಾ ಘಟಕದ ನೂತನ ಅಧ್ಯಕ್ಷ ಅನಂತಕುಮಾರ ಬುಗಡಿ ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ಬಳಿಕ ಮಾತನಾಡಿದ ರೊಮಿ ಭಾಟಿ ‘ಸೊಪ್ಪಿನ ಅವರು ಗ್ರಾಮೀಣ ಜನರ ಸಮಸ್ಯೆಗಳ ವಿರುದ್ಧ ತಮ್ಮ ಹೋರಾಟ ತೀವ್ರಗತಿಯಲ್ಲಿ ಮುಂದುವರಿಸಿ ಬರುವ ಬೇಸಿಗೆಗಾಲಕ್ಕೂ ಮೊದಲು ಕಳಸಾ ಬಂಡೂರಿ ಯೋಜನೆ ಕಾರ್ಯಾರಂಭಕ್ಕೆ ಪ್ರಯತ್ನಿಸಬೇಕು’ ಎಂದರು.

ಪಕ್ಷದ ಪ್ರಮುಖರಾದ ಶಶಿಕುಮಾರ ಸುಳ್ಳದ, ಪ್ರವೀಣ ಕುಮಾರ ನಡಕಟ್ಟಿಣ, ಮಲ್ಲಪ್ಪ ತಡಸದ, ಸಂತೋಷ ಮಾನೆ, ಮಲ್ಲಿಕಾರ್ಜುನಯ್ಯ ಹಿರೇಮಠ, ಸದಾನಂದ ಹೊಳೆಣ್ಣವರ, ಹಸನಸಾಬ ಇನಾಮದಾರ, ಶಿವಕುಮಾರ ಬಾಗಲಕೋಟ, ಮಹಬೂಬ ಹೊಸಮನಿ, ಡೇನಿಯಲ್ ಐಕೋಸ್‌ ಪಾಲ್ಗೊಂಡಿದ್ದರು.

Edited By :
Kshetra Samachara

Kshetra Samachara

16/01/2022 05:05 pm

Cinque Terre

10.74 K

Cinque Terre

0

ಸಂಬಂಧಿತ ಸುದ್ದಿ