ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ ಪುರಸಭೆ : ನಾಮಪತ್ರ ಸಲ್ಲಿಕೆಗೆ ಕೆಲವೇ ಗಂಟೆ ಬಾಕಿ, ಅಭ್ಯರ್ಥಿಗಳಿಗೆ ಇನ್ನೂ ಬಿ ಫಾರ್ಮ್ ಗತಿ ಇಲ್ಲ

ಪಬ್ಲಿಕ್ ನೆಕ್ಸ್ಟ್ ವಿಶೇಷ

ಅಣ್ಣಿಗೇರಿ : ವಿಧಾನ ಪರಿಷತ್ ಸೋಲು ಗೆಲುವಿನ ಲಕ್ಕಾಚಾರದಲ್ಲಿಯೇ ಮುಳುಗಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಇಲ್ಲಿಯ ಪುರಸಭೆ ಚುನಾವಣೆಯನ್ನೇ ಮರೆತಂತಿದೆ. ಬುಧವಾರ ಡಿ. 15 ರಂದು ಮಧ್ಯಾಹ್ನ 3 ಗಂಟೆಗೆ ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಕ್ತಾಯವಾಗುತ್ತಿದ್ದರೂ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಬಿ ಫಾರ್ಮ್‌ ನೀಡದಿರುವುದು ಆಯಾ ಪಕ್ಷಗಳ ಆಕಾಂಕ್ಷಿಗಳಲ್ಲಿ ಆತಂಕ ಮೂಡಿಸಿದೆ.

ಪಕ್ಷದ ನಾಯಕರ ವರ್ತನೆಯಿಂದ ಬೇಸತ್ತ ಅಭ್ಯರ್ಥಿಗಳೆಲ್ಲ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದಾರೆ. ಯಾರು ಅಧಿಕೃತ ಅಭ್ಯರ್ಥಿಗಳಾಗಲಿದ್ದಾರೆ? ಯಾವ ರೀತಿ ಪ್ರಚಾರ ಆರಂಭಿಸಬೇಕೆಂಬುದೇ ತಿಳಿಯುತ್ತಿಲ್ಲ. ಯಾರಿಗಾದರೂ ಬಿ ಫಾರ್ಮ್ ಕೊಡಲಿ ನಾವಂತೂ ಸ್ವತಂತ್ರವಾಗಿ ನಾಮಪತ್ರ ಸಲ್ಲಿಸಲಿದ್ದೇವೆ ಎಂದು ಬಹುತೇಕ ಆಕಾಂಕ್ಷಿಗಳು ಹೇಳಿಕೊಳ್ಳುತ್ತಿದ್ದಾರೆ.

ಅಣ್ಣಿಗೇರಿ ಬಿಜೆಪಿ ಧುರೀಣ ಷಣ್ಮುಖ ಗುರಿಕಾರ ಹಾಗೂ ಕಾಂಗ್ರೆಸ್ ಧುರೀಣ ಮಂಜುನಾಥ ಮಾಯಣ್ಣವರ ಆಯಾ ಪಕ್ಷಗಳ ಅಭ್ಯರ್ಥಿಗಳಿಗೆ ಬಿ ಫಾರ್ಮ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ.

ಏತನ್ಮಧ್ಯ ನವಲಗುಂದ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಎನ್.ಎಚ್ ಕೋನರಡ್ಡಿ ಕಾಂಗ್ರೆಸ್ ಸೇರಿದ್ದರಿಂದ ಈಗ ಧಾರವಾಡ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಅವರ ಮೇಲೆ ಅಣ್ಣಿಗೇರಿ ಪುರಸಭೆ ಚುನಾವಣೆ ಹಾಗೂ ಅಭ್ಯರ್ಥಿಗಳ ಆಯ್ಕೆ ಜವಾಬ್ದಾರಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಅಣ್ಣಿಗೇರಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಿದ ಹುಣಸಿಮರದ ಚುನಾವಣೆಗೆ ಸಜ್ಜಾಗುವಂತೆ ಕರೆ ನೀಡಿದ್ದಾರೆ.

ಕೋನರಡ್ಡಿಯೆ ಇರಬಹುದು ಅಥವಾ ಇನ್ನಾವುದೇ ನಾಯಕರಿರು ಜೆಡಿಎಸ್ ತ್ಯಜಿಸಿರಬಹುದು. ಆದರೆ ಇದರಿಂದ ಪಕ್ಷಕ್ಕೆ ಯಾವುದೇ ಹಾನಿಯಾಗದು. ಕೋನರಡ್ಡಿಯವರದು ವಯಕ್ತಿಕ ನಿರ್ಧಾರ. ನಾವು ಅಣ್ಣಿಗೇರಿಯ 23 ವಾರ್ಡುಗಳಿಗೂ ಅಭ್ಯರ್ಥಿಗಳನ್ನು ಹಾಕಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ಬುಧವಾರ ಒಂದೇ ದಿನ ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬೇಕಾಗಿದೆ. ಈ ಹಿಂದೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿ ಅಧಿಕಾರ ನಡೆಸಿದ್ದವು. ಈ ಬಾರಿ ಜೆಡಿಎಸ್ ಕ್ಷೀಣವಾಗಿರುವುದರಿಂದ ಬಿಜೆಪಿ ಏಕಾಂಗಿಯಾಗಿ ಹೋರಾಡಬೇಕಾಗಿದೆ.

ಡಿ. 15 ನಾಮಪತ್ರ ಸಲ್ಲಿಕೆ ಕೊನೆದಿನ, ನಾಮಪತ್ರ ಪರಿಶೀಲನೆ ದಿ. 16, ನಾಮಪತ್ರ ಹಿಂತೆಗದುಕೊಳ್ಳುವ ಕೊನೆದಿನ ದಿ. 18 , ಡಿ.27 ರಂದು ಮತದಾನ ಹಾಗೂ ದಿ. 30 ಮತ ಎಣಿಕೆ ನಡೆಯಲಿದೆ.

Edited By :
Kshetra Samachara

Kshetra Samachara

14/12/2021 07:39 pm

Cinque Terre

15.01 K

Cinque Terre

0

ಸಂಬಂಧಿತ ಸುದ್ದಿ