ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಸೇವೆ, ಸಮರ್ಪಣೆ ಅಭಿಯಾನ

ಕಲಘಟಗಿ: ತಾಲೂಕಿನ‌ ತಬಕದಹೊನ್ನಳ್ಳಿ ಗ್ರಾಮದಲ್ಲಿ ಸೇವೆ ಮತ್ತು ಸಮರ್ಪಣೆ ಅಭಿಯಾನ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಸಿ ಎಂ ನಿಂಬಣ್ಣನವರ, 'ಸೇವೆ ಮತ್ತು ಸಮರ್ಪಣೆ ಅಭಿಯಾನ ಅಂಗವಾಗಿ ಪಕ್ಷದಿಂದ ಆರೋಗ್ಯ ಶಿಬಿರಗಳನ್ನು ಗ್ರಾಮೀಣ ಭಾಗದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು' ಎಂದರು.

ಶಿಬಿರದಲ್ಲಿ 350 ಜನರು ಬಿಪಿ, ಶುಗರ್, ಇಸಿಜಿ ತಪಾಸಣೆ ಮಾಡಿಸಿಕೊಂಡರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಸಂಚಾಲಕ ಡಾ. ಬಸವಣ್ಣಯ್ಯ ಹಿರೇಮಠ, ಮಂಡಲ ಅಧ್ಯಕ್ಷ ಬಸವರಾಜ್ ಶೇರೆವಾಡ ಭಾಗವಹಿಸಿದ್ದರು.

Edited By : Vijay Kumar
Kshetra Samachara

Kshetra Samachara

04/10/2021 03:06 pm

Cinque Terre

7.09 K

Cinque Terre

0

ಸಂಬಂಧಿತ ಸುದ್ದಿ