ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾಲಿಕೆ ಚುನಾವಣೆಗೆ ಸಿದ್ದವಾಗ್ತಿರೋ ಇವಿಎಂ ಮಷೀನ್ ಗಳು

ಹುಬ್ಬಳ್ಳಿ- ರಾಜ್ಯದಲ್ಲಿ ಮೂರು ಮಹಾನಗರ ಪಾಲಿಕೆಗಳಿಗೆ ಈಗಾಗಲೇ ಚುನಾವಣಾ ದಿನಾಂಕ ನಿಗದಿಯಾಗಿದ್ದೆ ತಡ, ಎಲ್ಲ ಪಕ್ಷಗಳು ಚುನಾವಣಾ ತಯಾರಿ ನಡೆಯುತ್ತಿದೆ. ಇನ್ನೂ ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 82 ವಾರ್ಡ್ ಗಳಿವೆ. ಎಲ್ಲಾ ವಾರ್ಡಗಳಿಗೂ ಒಟ್ಟು 1005 ವೋಟಿಂಗ್ ಮಷೀನ್ ಅಗತ್ಯವಿದ್ದು, ಇವಿಎಂ ಪರಿಶೀಲನೆಯನ್ನ ಹುಬ್ಬಳ್ಳಿ ನಗರದ ಲ್ಯಾಮಿಂಗ್ಟನ್ ಶಾಲೆಯಲ್ಲಿ ನಡೆಸುತ್ತಿದ್ದಾರೆ.

ಸುಮಾರು 1500 ಕ್ಕೂ ಹೆಚ್ಚು ಮತಯಂತ್ರಗಳ ಅವಶ್ಯಕತೆ ಇದ್ದು, ಈ ಹಿಂದೆ ಚುನಾವಣೆಯಲ್ಲಿ ಬಳಕೆ ಮಾಡಿದ ಮತಯಂತ್ರಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ನಗರದ ಲ್ಯಾಮಿಗಂಟನ್ ಶಾಲೆಯಲ್ಲಿ ಈ ಪ್ರಕ್ರಿಯೆ ನಡೆದಿದ್ದು,ವ 150 ಕ್ಕೂ ಹೆಚ್ಚು ಪಾಲಿಕೆ ಎಂಜಿನಿಯರ್, ಪೌರ ಕಾರ್ಮಿಕರು ಮತ್ತು ಸಿಬ್ಬಂದಿಗಳು ಈ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಮತಯಂತ್ರಗಳ ಪರಿಷ್ಕರಿಸಿ ಅದರಲ್ಲಿ ಇರುವ ತಾಂತ್ರಿಕ ಲೋಪದೋಷ ಸರಿಪಡಿಸಿ ಬರುವ ಮಹಾನಗರ ಪಾಲಿಕೆ ಚುನಾವಣೆ ಬಳಸಿಕೊಳ್ಳುವುದು ಚುನಾವಣಾ ಆಯೋಗದ ಮೂಲ ಉದ್ದೇಶವಾಗಿದೆ.

ಸೂಕ್ತ ಭದ್ರತೆಯಿಂದ ಈ ಕಾರ್ಯ ಮೂರು ದಿನಗಳ ವರೆಗೂ ಮಾಡಲಾಗುತ್ತಿದ್ದು, ತಂಡಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಯಾರಾದ ಮತಯಂತ್ರಗಳನ್ನು ಭದ್ರತಾ ಕೊಠಡಿಯಲ್ಲಿ ಇರಿಸಲಾಗುತ್ತಿದೆ.

Edited By : Nagesh Gaonkar
Kshetra Samachara

Kshetra Samachara

21/08/2021 04:51 pm

Cinque Terre

72.52 K

Cinque Terre

5

ಸಂಬಂಧಿತ ಸುದ್ದಿ