ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ದಾಖಲೆಯ ಜಯ: ಮುನೇನಕೊಪ್ಪ ಭರವಸೆ

ಹುಬ್ಬಳ್ಳಿ: ದೇಶದ ಹಾಗೂ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಪಕ್ಷಕ್ಕೆ ಸಾಕಷ್ಟು ಬಲವನ್ನು ಹಾಗೂ ಜಯವನ್ನು ತಂದುಕೊಟ್ಟಿರುವ ಧಾರವಾಡ ಜಿಲ್ಲೆ ಈ ಬಾರಿ ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೂಡ ಉತ್ತಮ ಜಯವನ್ನು ಸಾಧಿಸುವ ಮೂಲಕ ಬಿಜೆಪಿ ಧ್ವಜವನ್ನು ರಾರಾಜಿಸುವಂತೆ ಮಾಡುತ್ತದೆ ಎಂದು ಸಚಿವ ಶಂಕರಪಾಟೀಲ ಮುನೇನಕೊಪ್ಪ ಭರವಸೆ ವ್ಯಕ್ತಪಡಿಸಿದರು.

ನಗರದಲ್ಲಿಂದು ಪಾಲಿಕೆ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಧಾರವಾಡ ಜಿಲ್ಲೆ ಭಾರತೀಯ ಜನತಾ ಪಕ್ಷಕ್ಕೆ ಸಾಕಷ್ಟು ಕೊಡುಗೆಯನ್ನು ಕೊಟ್ಟಿದೆ. ಮುಂಬೈ ಕರ್ನಾಟಕದಲ್ಲಿ ಬಿಜೆಪಿ ಪ್ರಬಲವಾಗಿ ಬೆಳೆಯಲು ಹುಬ್ಬಳ್ಳಿ-ಧಾರವಾಡ ಜನತೆಯ ಆಶೀರ್ವಾದವೇ ಕಾರಣ ಎಂದರು.

ಈಗಾಗಲೇ ರಾಜ್ಯದಲ್ಲಿಯೇ ‌ಬೆಳಗಾವಿ, ಕಲಬುರಗಿ ಸೇರಿದಂತೆ ಮಹಾನಗರ ಪಾಲಿಕೆಗಳಲ್ಲಿ ಚುನಾವಣೆ ನಡೆಯುತ್ತಿದೆ. ಆದರೆ ಹು-ಧಾ ಮಹಾನಗರ ಪಾಲಿಕೆಯು ಮಾತ್ರ ರಾಜ್ಯದ ಜನರ ದೃಷ್ಟಿಯನ್ನು ತನ್ನತ್ತ ನೋಡುವಂತೆ ಮಾಡಿದೆ ಎಂದರು

Edited By : Shivu K
Kshetra Samachara

Kshetra Samachara

17/08/2021 01:50 pm

Cinque Terre

27.83 K

Cinque Terre

2

ಸಂಬಂಧಿತ ಸುದ್ದಿ