ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ರೈತರ ಸಮಸ್ಯೆಗಳಿಗೆ ಪರಿಹಾರಕ್ಕೆ ರಾಜ್ಯ ರೈತ ಸಂಘದ ಒತ್ತಾಯ

ಕಲಘಟಗಿ: ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ರೈತದಿಂದ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದು,ಪರಿಹಾರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಂಡು ತಹಶೀಲ್ದಾರ ‌ಮೂಲಕ ಸರಕಾರಕ್ಕೆ‌ ಮನವಿ ಸಲ್ಲಿಸಲಾಯಿತು.

ತಾಲೂಕಿನಲ್ಲಿ ಅಕಾಲಿಕ ಮಳೆ ಹಾಗೂ ಅತಿವೃಷ್ಟಿಯಿಂದ ಬೆಳೆಹಾನಿಯಾಗಿದ್ದು,ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಹೆಚ್ಚು ಸಮಯ‌ ನೀಡಿಲ್ಲ,ಇದರಿಂದ ರೈತರಿಗೆ ಬೆಳೆ ಹಾನಿ‌ ಪರಿಹಾರ ಸರಿಯಾಗಿ ಪಡೆಯಲು ಆಗಿಲ್ಲ,ನರೇಗಾ,ತೋಟಗಾರಿಕೆ ಇಲಾಖೆಯ ಮಾಹಿತಿಯಾಗಲಿ,ಯೋಜನೆಯ ಸೌಲಭ್ಯಗಳು ಸಿಗುತ್ತಿಲ್ಲ ಎಂದು ರೈತರು ಸರಕಾರದ ಧೋರಣೆಯನ್ನ ಹಾಗೂ ವಿದ್ಯುತ್ ಖಾಸಗೀಕರಣ ಖಂಡಿಸಿದರು.

ಪಟ್ಟಣದ ಹೆದ್ದಾರಿ ಮೂಲಕ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು.ಸಂಘದ ರಾಜ್ಯಉಪಾಧ್ಯಕ್ಷ ಶಂಕ್ರಪ್ಪ ಮಡಿವಾಳರ,ಮಮತಾ ಫರಿಟ್,ಸುಭಾಸ ಸುಣಗಾರ,ಸೌಮ್ಯ ನಾಯಕಿ,ಸಿದ್ದನಗೌಡ ಪುರದನಗೌಡರ,ಈರಪ್ಪ ಅಂಗಡಿ,ಚನ್ನಪ್ಪ ದೊಡ್ಡಮನಿ,ಜ್ಯೋತಿಭಾ ಹುಲಕೊಪ್ಪ,ಮಂಜುನಾಥ ಬಮ್ಮಿಗಟ್ಟಿ,ಗೀತಾ ಹಿರೇಮಠ,ಪರ್ವತಗೌಡ ಪಾಟೀಲ,ರವಿ ಕೆಲಗೇರಿ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

10/08/2021 04:18 pm

Cinque Terre

19.93 K

Cinque Terre

0

ಸಂಬಂಧಿತ ಸುದ್ದಿ