ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮನೆಗೆ ಸಚಿವ ಮುರಗೇಶ್ ನಿರಾಣಿ ಭೇಟಿ ನೀಡಿ ಉಭಯ ಕುಷಲೋಪರಿ ವಿಚಾರಿಸಿದರು. ಅಲ್ಲದೇ ಕೆಲ ಕಾಲ ಜಗದೀಶ್ ಶೆಟ್ಟರ್ ಜೊತೆ ಮಾತುಕತೆ ನಡೆಸಿದರು.
ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಶೆಟ್ಟರ್ ಅವರು ಹಿರಿಯರಿದ್ದಾರೆ ಅವರ ಮಾರ್ಗದರ್ಶನ ನಮಗೆ ಬೇಕು. 2023 ರಲ್ಲಿ ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಇದಕ್ಕೆ ಜಗದೀಶ್ ಶೆಟ್ಟರ್ ಸಹಕಾರ ಬೇಕು. ನಮ್ಮ ಪಕ್ಷ ಯಾವತ್ತೂ ಹಿರಿಯರನ್ನು ಕಡೆಗಣಿಸಿಲ್ಲ ಎಂದರು.
ಶೆಟ್ಟರ ಅವರಿಗೆ ಯಾವ ಸ್ಥಾನ ಮಾನ ನೀಡಬೇಕೆಂದು ಹೇಳುವಷ್ಟು ದೊಡ್ಡವನು ನಾನಲ್ಲ. ನಮ್ಮ ರಾಜ್ಯ ಮತ್ತು ರಾಷ್ಟ್ರೀಯ ಮುಖಂಡರು ತೀರ್ಮಾನ ಮಾಡುತ್ತಾರೆ ಎಂದು ಶೆಟ್ಟರ್ ನಿವಾಸದಲ್ಲಿ ನೂತನ ಸಚಿವ ಮುರಗೇಶ್ ನಿರಾಣಿ ಹೇಳಿಕೆ ನೀಡಿದ್ದಾರೆ.
Kshetra Samachara
07/08/2021 01:01 pm