ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಾ.2ಕ್ಕೆ ಬೆಂಗಳೂರಿನಲ್ಲಿ ರ್ಯಾಲಿ: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿ...!

ಹುಬ್ಬಳ್ಳಿ: ಕೋರೊನಾ ಮಹಾಮಾರಿ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ನೀಡಬೇಕಾದ ಸೌಲಭ್ಯ ಹಾಗೂ ಸೇವಾ ಭದ್ರತೆ ನೀಡುವಲ್ಲಿ ಮೀನಾಮೇಷ ಎಣಿಸುತ್ತಿರುವುದನ್ನು ಖಂಡಿಸಿ ಮಾ.02ರಂದು ಬೆಂಗಳೂರಿನಲ್ಲಿ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಐಟಿಯುಸಿ ರಾಜ್ಯಾಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋರೊನಾ ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸಿ ಮೃತಪಟ್ಟಿರು ಅಂಗನವಾಡಿ ಕಾರ್ಯಕರ್ತೆಯರಿಗೆ 30 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸರ್ಕಾರ ಆದೇಶ ನೀಡಿದರು ಕೂಡ ಇದುವರೆಗೆ ಯಾವುದೇ ಪರಿಹಾರ ಅಂಗನವಾಡಿ ಕಾರ್ಯಕರ್ತೆಯರಿಗೆ ದೊರೆತಿಲ್ಲ.ಅಲ್ಲದೇ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಿದರು ಕೂಡ ಸೇವಾ ಭದ್ರತೆ ಇಲ್ಲವಾಗಿದೆ ಎಂದರು.

ಅಂಗನವಾಡಿ ಕಾರ್ಯಕರ್ತೆಯರ ಸೇವಾವಧಿ ಆಧಾರದ ಮೇಲೆ ಸಂಬಳವನ್ನು ನೀಡಬೇಕು.30 ವರ್ಷ ಕೆಲಸ ಮಾಡಿದವರಿಗೆ ಇಂದು ನಿನ್ನೆ ನೇಮಕಗೊಂಡವರ ರೀತಿಯಲ್ಲಿ ವೇತನ ನೀಡುತ್ತಿರುವುದು ಖಂಡನೀಯವಾಗಿದೆ ಕೂಡಲೇ ಈ ವ್ಯವಸ್ಥೆ ಬದಲಿಸಿ ಅಂಗನವಾಡಿ ಕಾರ್ಯಕರ್ತೆಯರನ್ನು ಮಹಿಳಾ ಕಾರ್ಮಿಕರು ಎಂದು ಘೋಷಣೆ ಮಾಡಿ ಸರ್ವೀಸ್ ಮೇಲೆ ವೇತನ ನೀಡಬೇಕು ಎಂದು ಆಗ್ರಹಿಸಿದರು.

Edited By : Manjunath H D
Kshetra Samachara

Kshetra Samachara

23/02/2021 11:26 am

Cinque Terre

15.99 K

Cinque Terre

0

ಸಂಬಂಧಿತ ಸುದ್ದಿ