ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪಿಎಫ್ಐ ದೇಶದ್ರೋಹಿ ಸಂಘಟನೆ

ಧಾರವಾಡ: ಪಿಎಫ್ಐ ಎಂಬುದೇ ಒಂದು ದೇಶದ್ರೋಹಿ ಸಂಘಟನೆ. ಆ ಸಂಘಟನೆ ಬಗ್ಗೆ ಹೆಚ್ಚಿಗೆ ಮಾತನಾಡುವ ಅಗತ್ಯವಿಲ್ಲ. ಸುಪ್ರೀಂಕೋರ್ಟ್ ನಲ್ಲಿ ಇತ್ಯರ್ಥವಾದ ನಂತರ ಒಂದು ಟ್ರಸ್ಟ್ ಮಾಡಿ ಅದರ ಮಾರ್ಗಸೂಚಿಯಂತೆ ರಾಮಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಶ್ರೀರಾಮನು ಕೇವಲ ಒಂದು ಸಮಾಜಕ್ಕೆ ಸೇರಿದವನಲ್ಲ. ಇಡೀ ದೇಶಕ್ಕೆ ಎಲ್ಲ ಸಮುದಾಯಕ್ಕೆ ಸೇರಿದವನು. ಇಡೀ ಜಗತ್ತೇ ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಧಾರವಾಡದಲ್ಲಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ್ಯಾವ ದೇಶದಲ್ಲಿ ನೂರಕ್ಕೆ ನೂರರಷ್ಟು ಇಸ್ಲಾಂ ಜನರೇ ಇದ್ದಾರೋ ಅಲ್ಲಿಯೂ ಕೂಡ ಅವರು ಶಾಂತಿಯಿಂದ ಇಲ್ಲ. ಇಂಡೋನೇಷ್ಯಾ ಹೊರತುಪಡಿಸಿದರೆ ಅತೀ ಹೆಚ್ಚು ಮುಸಲ್ಮಾನರಿರುವ ದೇಶ ಭಾರತ. ಆದರೂ ಇಲ್ಲಿ ಶಾಂತಿ, ಸಹಬಾಳ್ವೆ ಹಾಗೂ ಸಹಧರ್ಮದಿಂದ ನಾವೆಲ್ಲ ಬದುಕುತ್ತಿದ್ದೇವೆ. ಹೀಗಾಗಿ ಆರ್ ಎಸ್ಎಸ್ ಗ್ಗೆ ಪಿಎಫ್ಐ ಸಂಘಟನೆಯವರು ಪಾಠ ಹೇಳುವ ಅಗತ್ಯ ಇಲ್ಲ ಎಂದರು.

ಇಂದು ಇಡೀ ದೇಶ ಶಿವಾಜಿ ಮಹಾರಾಜರ 394 ನೇ ಜಯಂತ್ಯುತ್ಸವವನ್ನು ಆಚರಿಸುತ್ತಿದೆ. ಅಂದು ಹಿಂದೂ ಸಮಾಜ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದಾಗ ಹಿಂದೂ ಸಮಾಜದವರಿಗೆ ಆತ್ಮಸ್ಥೈರ್ಯ ತುಂಬಿ ಮೊಘಲರ ಹುಟ್ಟಡಗಿಸಿ ಹಿಂದವಿ ಸಾಮ್ರಾಜ್ಯ ನಿರ್ಮಿಸಿ ಶಿವಾಜಿ ಮಹಾರಾಜರು ಹಿಂದೂಗಳ ಮನದಲ್ಲಿ ನೆಲೆಸಿದರು. ಗೆರಿಲ್ಲಾ ಯುದ್ಧ, ಯುದ್ಧಕಲೆ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳ ಬಗ್ಗೆ ಶಿವಾಜಿ ಮಹಾರಾಜರು ಆಳವಾದ ಪಾಂಡಿತ್ಯ ಹೊಂದಿದ್ದರು. ಗಡಿ ಸಂರಕ್ಷಣೆ ಬಗ್ಗೆ ಅವರಿಗಿದ್ದ ಕಲ್ಪನೆ ಅತ್ಯದ್ಭುತವಾದಂತದ್ದು ಎಂದರು.

Edited By : Manjunath H D
Kshetra Samachara

Kshetra Samachara

19/02/2021 06:08 pm

Cinque Terre

33.13 K

Cinque Terre

3

ಸಂಬಂಧಿತ ಸುದ್ದಿ