ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೆ.ಎಲ್.ಇ ಸಂಸ್ಥೆ ಕಟ್ಟುತ್ತಿರುವ ಮೆಡಿಕಲ್ ಕಾಲೇಜಿಗೆ ದಿಂಗಾಲೇಶ್ವರ ಶ್ರೀಗಳು ಅಡ್ಡಿ ಮಾಡಿದ್ದು ಖಂಡನೀಯ- ವೀರಣ್ಣ ಕಲ್ಲೂರ

ಹುಬ್ಬಳ್ಳಿ: ಕೆ ಎಲ್ ಇ ಸಂಸ್ಥೆಯಿಂದ ಹುಬ್ಬಳ್ಳಿಯಲ್ಲಿ ಬೃಹತ್ ಆಸ್ಪತ್ರೆಯ ಮತ್ತು ಮೆಡಿಕಲ್ ಮಹಾವಿದ್ಯಾಲಯ ನಿರ್ಮಾಣವಾಗುತ್ತಿರವುದರಿಂದ, ಈ ಭಾಗದ ಜನತೆಗೆ ಉದ್ಯೋಗ ದೊರೆಯಲಿದೆ ಆದ್ದರಿಂದ. ದಿಂಗಾಲೇಶ್ವರ ಸ್ವಾಮೀಜಿ ಅವರು ಆಸ್ಪತ್ರೆಯ ನಿರ್ಮಾಣಕ್ಕೆ ಅಡ್ಡಿಪಡಿಸಬಾರದು ಎಂದು ವೀರಣ್ಣ ಕಲ್ಲೂರ ಹೇಳಿದರು.

ಮಾಧ್ಯಮದ ಜೊತೆ ಮಾತನಾಡಿದ ಅವರು, ಮೂರು ಸಾವಿರ ಮಠದ ಹಿಂದಿನ ಲಿಂ. ಪೂಜ್ಯ ಜಗದ್ಗುರುಗಳಾದ ಮೂಜಗಂ ಅವರು ಆಗ ಸಮಾಜದ ಹಿರಿಯರ ಜೊತೆಗೆ ಚರ್ಚಿಸಿ, ಸ್ವ ಇಚ್ಚೆಯಿಂದ ಸಮಾಜದ ಒಳತಿಗಾಗಿ ಬಡವರು ಹಾಗೂ ಬಡ ಮಕ್ಕಳ ಸಲುವಾಗಿ ವೈದ್ಯಕೀಯ ಕಾಲೇಜು ಶಿಕ್ಷಣ ಪಡೆಯಲು ಅನಕೂಲವಾಗಲೇಂದು, ಕೆ ಎಲ್ ಇ ಸಂಸ್ಥೆಯವರಿಗೆ ವೈದ್ಯಕೀಯ ಮಹಾವಿದ್ಯಾಲಯ

ನಿರ್ಮಿಸಲು ಸಮಾಜದವರೆ ನೀಡಿದ ಜಮೀನನ್ನು ಸಮಾಜದ ಸ್ವಂತಾದ ಕೆ ಎಲ್ ಇ ಸಂಸ್ಥೆಗೆ, ದಾನವಾಗಿ ಕೊಡಲು ಒಪ್ಪಿ 2002-3 ರಲ್ಲಿ ಮೇಹರಬಾನ್ ಚಾರಿಟಿ ಕಮೀಶನರ್ ಪರವಾಗಿ ಪಡೆದಿದ್ದು. ಈ ಜಮೀನಿನಲ್ಲಿ ಆಧುನಿಕ ಬ್ರಹತ್ ಆಸ್ಪತ್ರೆ ಹಾಗೂ ಮೆಡಿಕಲ್ ಮಹಾವಿದ್ಯಾಲಯ ನಿರ್ಮಿಸಿದರೆ ಈ ಭಾಗದ ಬಡ ಜನತೆಗೆ ಉಚಿತ ಆರೋಗ್ಯ ಸೇವೆ ಹಾಗೂ ಮಕ್ಕಳಿಗೆ ಆ ಕಾಲೇಜನಲ್ಲಿ ಸಾಕಷ್ಟು ಸೌಕರ್ಯಗಳು ಉಚಿತವಾಗಿ ನೀಡುವ ಭರವಸೆಯನ್ನು ಸಂಸ್ಥೆಯವರು ನೀಡಿದ್ದಾರೆ. ಆದ್ದರಿಂದ ದಿಂಗಾಲೇಶ್ವರ ಸ್ವಾಮೀಜಿ ಅವರು ಆಸ್ಪತ್ರೆಯ ನಿರ್ಮಾಣ ಮಾಡಲು ಅಡ್ಡಿಪಡಿಸಬಾರದು ಎಂದರು.

Edited By : Manjunath H D
Kshetra Samachara

Kshetra Samachara

18/02/2021 01:58 pm

Cinque Terre

53.24 K

Cinque Terre

17

ಸಂಬಂಧಿತ ಸುದ್ದಿ