ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ವಾರ್ಷಿಕ ಅಯವ್ಯಯದ ಕುರಿತು ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ನೇತೃತ್ವದಲ್ಲಿಂದು ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಯಿತು..
ಮಹಾನಗರ ಪಾಲಿಕೆ ಕಚೇರಿಯಲ್ಲಿಂದು ಆಯೋಜಿಸಲಾಗಿದ್ದ ಸಭೆಯಲ್ಲಿ ಹು-ಧಾ ಮಹಾನಗರ ಜನರು ಪಾಲ್ಗೊಂಡು ಅವಳಿನಗರದ ಸಮಸ್ಯೆ ಕುರಿತು ಆಯುಕ್ತರಿಗೆ ಮನವಿ ಮಾಡಿದರು.
ವಾರ್ಷಿಕ ಅಯವ್ಯಯ-2021-22ನ್ನು ಮಂಡಿಸುವ ಪೂರ್ವದಲ್ಲಿ ಹು-ಧಾ ಅವಳಿನಗರದ ಸಾರ್ವಜನಿಕ ಸಭೆಯನ್ನು ಕರೆದು ಅಹವಾಲು ಸ್ವೀಕರಿಸಲಾಯಿತು.
ಇನ್ನೂ ಇದೇ ವೇಳೆ ಸಭೆಯಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು ಮೂಲಭೂತ ಸೌಕರ್ಯಗಳ ಸಮಸ್ಯೆ ನಿವಾರಣೆ ಹಾಗೂ ಅವಳಿನಗರದ ಸಮಸ್ಯೆ ಕುರಿತು ಆಯುಕ್ತರಿಗೆ ಮಾಹಿತಿ ನೀಡಿದ್ದಾರೆ.
Kshetra Samachara
15/02/2021 05:41 pm