ಕಲಘಟಗಿ:ತಾಂಡಾಗಳ ಸರ್ವಾಂಗೀಣ ಅಭಿವೃದ್ದಿಗೆ ಸದನದಲ್ಲಿ ಚರ್ಚಿಸಿ ಸರಕಾರದ ಗಮನ ಸೆಳೆಯಲಾಗುವುದು ಎಂದು ಶಾಸಕ ಸಿ.ಎಂ. ನಿಂಬಣ್ಣನವರ ನುಡಿದರು.
ಅವರು ಪಟ್ಟಣದಲ್ಲಿ ಶ್ರೀ ಸಂತ ಸೇವಾಲಾಲರ 282 ನೇ ಜಯಂತಿಯ,ಭೋಗ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿ,ಮತಕ್ಷೇತ್ರದಲ್ಲಿ 11 ತಾಂಡಾಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಸದನದಲ್ಲಿ ಚರ್ಚಿಸಿ ನಿರಂತರವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಗೋರ ಸೇನಾ ರಾಜ್ಯಾಧ್ಯಕ್ಷ ರವಿಕಾಂತ ಲಾಖಾವತ,ಮಾತನಾಡಿ ಬಂಜಾರ ಭವನಕ್ಕೆ ನಿರ್ಮಾಣಕ್ಕೆ ತಾಂಡಾ ಅಭಿವೃದ್ಧಿ ನಿಗಮದಿಂದ 1ಕೋಟಿ ಅನುದಾನ ನೀಡಲಾಗಿದ್ದು,ಪಟ್ಟಣದಲ್ಲಿ ಸರಕಾರಿ ಜಾಗೆ ನೀಡಲು ಶಾಸಕರಿಗೆ ಮನವಿ ಮಾಡಿಕೊಂಡರು.
ಬಂಜಾರ ಗುರುಸ್ವಾಮಿ ಬುಜಂಗ ಸ್ವಾಮಿ,ತಾಲೂಕಾ ಅಧ್ಯಕ್ಷ ವಾಸು ಲಮಾಣಿ,ಮಂಗಲಪ್ಪ ಲಮಾಣಿ,ಅರ್ಜುನ ಲಮಾಣಿ,ಗಂಗಾಧರ ಗೌಳಿ,ಅಶೋಕ ಲಮಾಣಿ,ವಾಚಪ್ಪ ಲಮಾಣಿ,ಹನಮಂತ ಲಮಾಣಿ,ವಾಸು ಲಮಾಣಿ,ಪ್ರಕಾಶ ಲಮಾಣಿ,ರವಿ ಲಮಾಣಿ ಮಂಜು ಪಮ್ಮಾರ ದೇವರಾಜ ಪೋಳ ಹಾಗೂ ಹತ್ತು ತಾಂಡಾದ ಹಿರಿಯರು ಹಾಗೂ ಮಾಲಾಧಾರಿಗಳು ಉಪಸ್ಥಿತರಿದರು.
Kshetra Samachara
14/02/2021 04:19 pm