ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : 2ಎ ಮೀಸಲಾತಿಗೆ ಆಗ್ರಹ ಬೆಂಗಳೂರು ಚಲೋ ಎಂದ ಹಳ್ಳಿಗರು

ಕುಂದಗೋಳ : ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂಬ ಕೂಗಿಗೆ ಹಳ್ಳಿ ಹಳ್ಳಿಗಳಲ್ಲೂ ವ್ಯಾಪಕ ಬೆಂಬಲ ಒದಗಿದ್ದು ಬೆಂಗಳೂರು ಚಲೋ ಕಾರ್ಯಕ್ರಮದ ಪೂರ್ವಭಾವಿ ಸಭೆ ಹಿರೇಹರಕುಣಿ ಗ್ರಾಮದಲ್ಲಿ ಇಂದು ನಡೆಯಿತು.

ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ವಚನಾನಂದ ಮಹಾಸ್ವಾಮಿಗಳು ನೇತೃತ್ವದಲ್ಲಿ ಕುಂದಗೋಳ ತಾಲೂಕಿನ ಪ್ರತಿ ಹಳ್ಳಿಗಳಿಂದಲೂ ಜನರು ಬೆಂಬಲಿಸಿ ಹೋರಾಟ ಮಾಡಬೇಕೆಂದು ಹಳ್ಳಿಗರಲ್ಲಿ ಪಂಚಮಸಾಲಿ ಸಮಾಜದ ಮುಖಂಡರು ಮನವಿ ಮಾಡಿಕೊಂಡರು.

ಎಲ್ಲ ಪಂಗಡಗಳೂ ಮೀಸಲಾತಿ ಹೋರಾಟಕ್ಕೆ ಸಜ್ಜಾಗಿವೆ. ಅದರಲ್ಲಿ ಬಹು ಸಂಖ್ಯಾತರು ಎನಿಸಿಕೊಂಡವರು ನಾವು ಪಂಚಮಸಾಲಿ ಸಮಾಜದವರು ನಮ್ಮಲ್ಲಿ ಕೇವಲ ಪಂಚಮಸಾಲಿ ಜಾತಿ ಒಂದೇ ಇಲ್ಲಾ. ಈ ಪಂಚಮಸಾಲಿ ಒಳಗೆ ಹಲವಾರು ಜಾತಿ ಉಪ ಜಾತಿಗಳಿವೆ ಅವರೆಲ್ಲರಿಗೂ 2ಎ ಮೀಸಲಾತಿ ಒದಗಿಸಬೇಕು.

ನಮ್ಮ ಮುಕ್ಕಳು ಅವರ ಭವಿಷ್ಯತ್ ಹಾಗೂ ಮುಂಬುರುವ ದಿನಗಳಲ್ಲಿ ಈ ಬಗ್ಗೆ ನಮಗೆ ಸೌಲಭ್ಯ ಸಿಗಬೇಕು ಎಂದರೇ ಈದೀಗ ನಾವು ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ಪಂಚಮಸಾಲಿ ಸಮಾಜದ ಜನರು ಹಿರೇಹರಕುಣಿ ಬಸವೇಶ್ವರ ದೇವಸ್ಥಾನದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದರು.

ಈ ಸಂದರ್ಭದಲ್ಲಿ ಹಿರೇಹರುಕುಣಿಯ ಗುರು ಹಿರಿಯರು ಪಂಚಮಸಾಲಿ ಸಮಾಜದ ಮುಖಂಡರು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

13/02/2021 03:55 pm

Cinque Terre

14.9 K

Cinque Terre

0

ಸಂಬಂಧಿತ ಸುದ್ದಿ